Ad imageAd image

ಸೆಪ್ಟೆಂಬರ್ ನಂತರ ಪಿಎಂ ಬದಲಾವಣೆಯೇ ? ರಾವಸಾಬ ಐಹೊಳೆ

Bharath Vaibhav
ಸೆಪ್ಟೆಂಬರ್ ನಂತರ ಪಿಎಂ ಬದಲಾವಣೆಯೇ ? ರಾವಸಾಬ ಐಹೊಳೆ
WhatsApp Group Join Now
Telegram Group Join Now

ಚಿಕ್ಕೊಡಿ : ಆರ್ ಎಸ್ ಎಸ್ ಸಂಘಟನೆ ಮೂಲ ಸಿದ್ದಾಂತ ಬಿಜೆಪಿ ಪಕ್ಷದಲ್ಲಿ ಹಾಗೂ ಆರ್ ಎಸ್ ಎಸ್ ಸಂಘಟನೆಯಲ್ಲಿರುವಂತಹ ಯಾವುದೇ ಹಿರಿಯ ಮುಖಂಡರುಗಳು 75 ವರ್ಷದ ನಂತರ ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟು ರಾಜಕೀಯದ ತಮ್ಮ ಸ್ಥಾನಮಾನಗಳಿಂದ ಮತ್ತು ಸಂಘಟನೆಯಿಂದ ನಿವೃತ್ತಿಯಾಗಬೇಕು. ಇದು ಆರ್ ಎಸ್ ಎಸ್ ನ ಮೂಲ ಸಿದ್ಧಾಂತವಾಗಿದೆ ಎಂದು ಕೆಪಿಸಿಸಿ ಚಿಕ್ಕೊಡಿ ಜಿಲ್ಲಾ ಪರಿಶಿಷ್ಟ ಜಾತಿಯ ವಿಭಾಗದ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ ಹೇಳಿದರು.

ಅವರು ಚಿಕ್ಕೊಡಿಯಲ್ಲಿ ಮಾತನಾಡಿ ಈ ಕಟ್ಟಪಾಡುಗಳಿಗೆ ಅನೇಕ ಬಿಜೆಪಿಗೆ ನಾಯಕರುಗಳು ದೇಶಾದ್ಯಂತ ಮತ್ತು ಅಳುವ ರಾಜ್ಯಗಳಲ್ಲಿ ಈ ಸಿದ್ದಾಂತವನ್ನು ಪಾಲಿಸಿದ್ದಾರೆ. ಉದಾಹರಣೆ ನಮ್ಮ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಿಎಂ ಸ್ಥಾನವನ್ನು ಬಿಟ್ಟು ಕೊಟ್ಟಿದ್ದರು. ಎಲ್ ಕೆ ಅಡ್ವಾಣಿಯವರು ತಮಗೆ ಸಿಗಬೇಕಾದ ಪಿಎಂ ಸ್ಥಾನಮಾನವನ್ನೇ ಆರ್ ಎಸ್ ಎಸ್ ನ ಕಟ್ಟುಪಾಡುಗಳಿಗೆ ಬಿಟ್ಟುಕೊಟ್ಟರು.
ಮಾಜಿ ಪ್ರಧಾನ ಮಂತ್ರಿಗಳಾದ ವಾಜಪೇಯಿ ಅವರು 75 ವರ್ಷಗಳ ನಂತರ ರಾಜಕೀಯ ನಿವೃತ್ತಿಯನ್ನು ಪಡೆದುಕೊಂಡರು. ಈ ರೀತಿಯಾಗಿ ಸಾಲು ಸಾಲು ಹಿರಿಯ ಮುಖಂಡರುಗಳಾದ ಬಿಜೆಪಿ ನಾಯಕರುಗಳು, ಹಾಗೂ ಆರ್ ಎಸ್ ಎಸ್ ಸಂಘಟನೆಯಲ್ಲಿರುವ ಅನೇಕ ಹಿರಿಯ ನಾಯಕರುಗಳು ಆರ್ ಎಸ್ ಎಸ್ ಸಿದ್ದಾಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಇಂತಹ ಸಂದರ್ಭವೇ ದೇಶದ ಪ್ರಧಾನಮಂತ್ರಿಯದ ನರೇಂದ್ರ ಮೋದಿಜಿ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ 75 ವರ್ಷ ತುಂಬುತ್ತದೆ. ಈಗ ದೇಶದ ಪ್ರಧಾನಮಂತ್ರಿಯದ ನರೇಂದ್ರ ಮೋದಿಜಿ ಅವರು ಆರ್ ಎಸ್ ಎಸ್ ನ ಮೂಲ ಸಿದ್ದಾಂತಕ್ಕೆ ಒಪ್ಪಿಕೊಂಡು ಸೆಪ್ಟೆಂಬರ್ ನಂತರ ರಾಜೀನಾಮೆ ಕೊಟ್ಟು ಬೇರೆ ಪ್ರಧಾನಮಂತ್ರಿಯಾಗುವುದಕ್ಕೆ ಅವಕಾಶವನ್ನು ಕೊಡುತ್ತಾರೆಯೇ ನಿಮ್ಮ ಪ್ರಶ್ನೆ ದೇಶಾದ್ಯಂತ ಸಂಚಲನವನ್ನು ಮೂಡಿಸುತ್ತಿದೆ.

ಆದ್ದರಿಂದ ನಿಜವಾಗಿ ಬಿಜೆಪಿ ನಾಯಕರುಗಳು ಆರ್ ಎಸ್ ಎಸ್ ಸಿದ್ಧಾಂತಕ್ಕೆ ಕಟ್ಟುಪಾಡಾಗಿದ್ದರೆ ಮೋದಿಯವರು ತಮ್ಮ ಪಿಎಂ ಸ್ಥಾನವನ್ನು ಬಿಟ್ಟು ಕೊಡಬೇಕಾಗಿದೆ. ಒಂದು ವೇಳೆ ಪಿಎಂ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ ಅಂತ ಅಂದ್ರೆ ಆರ್ ಎಸ್ ಎಸ್ ಯಾವುದೇ ಸಿದ್ದಾಂತಗಳನ್ನು ಬಿಜೆಪಿ ನಾಯಕರುಗಳು ಪಾಲಿಸುವುದಿಲ್ಲ ಎಂಬುದನ್ನು ಅರ್ಥವಾಗುತ್ತದೆ. ಇದಕ್ಕಿಂತ ಮುಂಚೆ ಏಪ್ರಿಲ್ ತಿಂಗಳಲ್ಲಿ ಮೋದಿಯವರು ಕಳೆದ 10 ವರ್ಷಗಳಿಂದ ಯಾವುದೇ ಕಾರಣಕ್ಕೆ ಆರ್ ಎಸ್ ಎಸ್ ಕಾರ್ಯಕ್ರಮಗಳಾಗಲಿ, ಅಥವಾ ಸಂಘಟನೆಯ ಸ್ಥಾಪನಾ ದಿನಕ್ಕಾಗಲಿ ಹಾಗೂ ಆರ್ ಎಸ್ ಎಸ್ ಸಂಘಟನೆಯ ಕಚೇರಿಗೆ ಭೇಟಿ ನೀಡಲಿಲ್ಲ, ಆದರೆ ದಿಡೀರನೆ ನನಗೆ 75 ವರ್ಷ ತುಂಬುತ್ತದೆ, ಎಂಬುದನ್ನು ಮನಗೊಂಡು ಈ ವರ್ಷ ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡುತ್ತಾರೆ. ಎಲ್ಲೋ ಒಂದು ಕಡೆಗೆ ಆರ್ ಎಸ್ ಎಸ್ ಎಂದರೆ ಮೋದಿಯವರಿಗೆ ಮತ್ತು ಬಿಜೆಪಿ ನಾಯಕರಿಗೆ ಭಯ ನಾ ಎಂಬುದನ್ನು ತಿಳಿಯುತ್ತದೆ.
ಆದ್ದರಿಂದ ಆರ್ ಎಸ್ ಎಸ್ ಕಚೇರಿಗೆ ಮೋದಿ ಅವರು ಭೇಟಿ ನೀಡಿದ್ದೀರಾ, ಸೆಪ್ಟೆಂಬರ್ ನಂತರ ಪಿಎಂ ಬದಲಾವಣೆ ಆಗುವುದಕ್ಕೆ ಆರ್ ಎಸ್ ಎಸ್ ಒತ್ತಡ ಹಾಕುತ್ತಿದ್ದಾರೆಯೇ, ಎಂದು ಕಾದು ನೋಡಬೇಕಾಗಿದೆ ಈಗಾಗಲೇ ಅನೇಕ ಆರ್ ಎಸ್ ಎಸ್ ಮುಖಂಡರುಗಳು ಬಹಿರಂಗ ಸಭೆಗಳಲ್ಲಿ ಹಾಗೂ ಸಮಾವೇಶಗಳಲ್ಲಿ ಯಾವುದೇ ಬಿಜೆಪಿ ನಾಯಕರುಗಳು ಮತ್ತು ಸಂಘಟನೆ ಹಿರಿಯ ಮುಖಂಡರುಗಳು 75 ವರ್ಷಗಳ ನಂತರ ತಮ್ಮ ಸ್ಥಾನಮಾನಗಳಿಂದ ನಿವೃತ್ತಿ ಆಗಬೇಕು ಕಂಠಗೋಶವಾಗಿ ಘೋಷಿಸುತ್ತಿದ್ದಾರೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಆದ್ದರಿಂದ ಸೆಪ್ಟೆಂಬರ್ ನಂತರ ದೇಶದಲ್ಲಿ ಮತ್ತು ಬಿಜೆಪಿ ಪಕ್ಷದಲ್ಲಿ ತುರ್ತು ಪರಿಸ್ಥಿತಿ ಎದುರಾಗಬಹುದು ಎಂಬುದನ್ನು ತಿಳಿಯುತ್ತಿದೆ, ಇಲ್ಲಾಂದ್ರೆ ಬಿಜೆಪಿ ನಾಯಕರುಗಳು ಆರ್ ಎಸ್ ಎಸ್ ಸಂಘಟನೆಯನ್ನು ಚುನಾವಣೆಗಳಲ್ಲಿ ಗೆಲ್ಲುವುದಕ್ಕೋಸ್ಕರ ಅಥವಾ ತಮ್ಮ ಅಧಿಕಾರವನ್ನು ಪಡೆದುಕೊಳ್ಳುವುದಕ್ಕೋಸ್ಕರ ಆರ್ ಎಸ್ ಎಸ್ ಸಂಘಟನೆಯನ್ನು ದುರುಪಯೋಗ ಮಾಡಿಕೊಂಡುತ್ತಿದ್ದಾರೆಯೇ ಸ್ಪಷ್ಟ ಮಾಹಿತಿಯನ್ನು ಬಿಜೆಪಿ ನಾಯಕರುಗಳು ಮತ್ತು ಆರ್ ಎಸ್ ಎಸ್ ಸಂಘಟನೆಯ ಮುಖಂಡರುಗಳು ಈ ದೇಶದ ಜನರಿಗೆ ತಿಳಿಸಬೇಕೆಂದು ನಾವು ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!