ಐಗಳಿ: ಅಥಣಿ ತಾಲ್ಲೂಕಿನ ಐಗಳಿ ಗ್ರಾಮದ ಮಾದಿಗ ಸಮಾಜದ ಹಿರಿಯರಾದ ಶ್ರೀ ಪುಂಡಲೀಕ ಸೈದಪ್ಪ ಮಾದರ ಇವರಿಗೆ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಜಯಂತಿ ನಿಮಿತ್ಯವಾಗಿ ರಾಜ್ಯ ಸರ್ಕಾರದಿಂದ ಸಾಧಕರಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ ಇದರಿಂದ ತಾಲೂಕಿನ ಕಿತಿ೯ ಹೆಚ್ಚಿಸಿದೆ ಎಂದು ರಾವ್ ಸಾಬ್ ಐಹೊಳೆ ಹೇಳಿದರು ಅವರು ಐಗಳಿ ಗ್ರಾಮಕ್ಕೆ ಆಗಮಿಸಿ ಅಥಣಿ ತಾಲುಕಾ ಮಾದಿಗ ಸಮುದಾಯದ ವತಿಯಿಂದ ಪ್ಸರಶಸ್ತಿ ಪಡೆದ ಪುಂಡಲೀಕ ಮಾದರ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಅಥಣಿ ಪುರಸಭೆ ಸದಸ್ಯರು ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ, ತಾಲೂಕು ಅಧ್ಯಕ್ಷ ಹನಮಂತ ಅರ್ದಾವೂರ್,ಕುಮಾರ ಗಸ್ತಿ,ರಾಜು ರಾಜಾಂಗಲೇ, ಹನಮಂತ ಮಾದರ,ಪರಶುರಾಮ್ ಮಾದರ ,ಆನಂದ ಮಾದರ ಸೈದಪ್ಪ ಮಾದರ,ಆಕಾಶ ಮಾದರ ಮುಂತಾದವರು ಹಾಜರಿದ್ದರು.