ಅಥಣಿ: -ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಅಥನಿ ಸಮೂಹ ಸಂಪನ್ಮೂಲ ಕೇಂದ್ರ ಅಥಣಿ ನಗರದ ಆದರ್ಶ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಅಥಣಿ ಇವರ ಸಂಯೋಗದಲ್ಲಿ ಅಥಣಿ ನಗರದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾವಸಾಹೇಬ್. ಎನ್. ಐಹೊಳೆ ಅವರು ಸರಸ್ವತಿ ಫೋಟೋ ಪೂಜೆ ಹಾಗೂ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಇಂದಿನ ಮಕ್ಕಳಿಗೆ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಮಕ್ಕಳು ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವುದರ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಇದೊಂದು ಸದಾ ಅವಕಾಶ ಎಂದು ಭಾವಿಸಿದರೆ ಮುಂದಿನ ದಿನಮಾನಗಳಲ್ಲಿ ಎತ್ತರ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಂತರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದ ಅಧ್ಯಕ್ಷರು ಜಿ.ಎಂ ಹಿರೇಮಠ್ ಅವರು ಮಾತನಾಡಿ ಮಕ್ಕಳು ಶಿಕ್ಷಣ ಜೊತೆ ಒಳ್ಳೆ ಬದುಕನ್ನು ರೂಪಿಸಿಕೊಳ್ಳಲು ಇದೊಂದು ಅವಕಾಶ ವೆಂದು ಭಾವಿಸಿದರೆ ತಮ್ಮ ಪ್ರತಿಭೆಗಳನ್ನು ಹೊರ ಹಾಕಲು ಸದಾ ಅವಕಾಶವನ್ನು ಯಾರು ತಪ್ಪಿಸಿಕೊಳ್ಳಬಾರದು ಭಾಷಣ ಸ್ಪರ್ಧೆ ಆಗಿರಬಹುದು ಚಿತ್ರಕಲೆ ಆಗಿರಬಹುದು ನೃತ್ಯ ಕಲೆಯಾಗಿರಬಹುದು ಅನೇಕ ರಂಗದಲ್ಲಿ ಕೌಶಲತೆಯನ್ನು ಗುರುತಿಸಿಕೊಳ್ಳುವಲ್ಲಿ ಪಾತ್ರ ನಿಮ್ಮದಾಗಿದೆ ಇದನ್ನೇ ಆದರ್ಶವಾಗಿ ಇಟ್ಟುಕೊಂಡು ಮುಂದಿನ ದಿನಮಾನಗಳಲ್ಲಿ ನಿಮ್ಮನ್ನು ಎತ್ತರ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮನ್ವಯ ಅಧಿಕಾರಿಗಳಾದ ಜಿ.ಎ ಖೋತ ಮತ್ತು ಎನ್. ಎಂ ಹಿರೇಮಠ್, ಸಿ ಆರ್ ಪಿ ಅಥಣಿ ನಗರ. ಅವರು ಮಾತನಾಡಿದರು.ಪ್ರತಿಭಾ ಕಾರಂಜಿಯಲ್ಲಿ ಅನೇಕ ಮಕ್ಕಳು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ತೃತೀಯ ಪ್ರಶಸ್ತಿ ಪತ್ರ ವಿತರಣೆ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಎಸ್ ವೈ ಹುಂಡೆದಾರ ಶಿಕ್ಷಣ ಸಂಯೋಜಕರು. ಹಾಗೂ ಎಸ್ ಎಸ್ ಗಸ್ತಿ ಶಿಕ್ಷಣ ಸಂಯೋಜಕರು. ಮತ್ತು ಸಿ ಎಸ್ ಕೋಟ್ಯಾಳ. ಎಸ್. ಬಿ ಕೋಳೆಕರ್ ಎ.ಆರ್ ಸವದಿ. ಡಿ. ಹೆಚ್. ಮುಲ್ಲಾ ಜಿ. ಜಿ. ಪವಾರ್ ಆಡಳಿತ ಅಧಿಕಾರಿಗಳು ಶಿಕ್ಷಕ. ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: -ರಾಜು. ಎಮ್. ವಾಘಮಾರೆ.