ದಾವಣಗೆರೆ: ತಮ್ಮದೇ ವಾಕ್‌ಚಾತುರ್ಯ, ಖಡಕ್ ನುಡಿ ಹಾಗೂ ಯುವಜನತೆಗೆ ರೋಲ್ ಮಾಡೆಲ್ ಎಂಬಂತೆ ಬಿಂಬಿತವಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಕಳೆದ ನಾಲ್ಕು ವರ್ಷದಿಂದ ಖಾಲಿಯಿದ್ದೇನೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಬಹಳ ಪರಿಶ್ರಮವಹಿಸಿ ಐಪಿಎಸ್ ಹುದ್ದೆ ಗಿಟ್ಟಿಸಿಕೊಂಡೆ.
ಆದರೆ, ಕಳೆದ ನಾಲ್ಕು ವರ್ಷದಿಂದ ನಾನು ಖಾಲಿಯಿರುವಂತಾಗಿದೆ ಎಂದು ಸರಕಾರದ ವಿರುದ್ಧ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ವಿಶ್ವಾಸ ತುಂಬಿದ ವಿ.ಸೋಮಣ್ಣ
ರವಿ ಡಿ.ಚೆನ್ನಣ್ಣ ಅವರ ಭಾಷಣದ ನಂತರ ಮಾತನಾಡಿದ ಸಂಸದ ವಿ.ಸೋಮಣ್ಣ, ಬಿಜೆಪಿ ಸರ್ಕಾರದಲ್ಲಿ ರವಿ ಚನ್ನಣ್ಣನವರನ್ನು ಚೆನ್ನಾಗಿ ನಡೆಸಿಕೊಂಡಿದ್ದೇವೆ. ಆದರೆ, ಈಗ ಅವರಿಗೆ ತೊಂದರೆ ಆಗಿರಬೇಕು.
ಅದಕ್ಕೆ ಅವರು ಖಾಲಿ ಇದ್ದೇನೆ ಎಂದು ಹೇಳುತ್ತಿದ್ದಾರೆ. ರವಿ ಚನ್ನಣ್ಣವರ ಒಪ್ಪಿದರೆ ಕೇಂದ್ರ ಸರ್ಕಾರದ ಸೇವೆಗೆ ತೆಗೆದುಕೊಳ್ಳುತ್ತೇವೆ ಎಂದರು.ತಾಳ್ಮೆ ಇರಲಿ, ಪ್ರತಿಭೆ ಮಾನದಂಡ, ಅವಕಾಶ ಹುಡುಕಿಕೊಂಡು ಬರುತ್ತದೆ ಎಂದು ರವಿ ಡಿ ಚೆನ್ನಣ್ಣನವರ್ ಅವರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಸಮಾಧಾನಪಡಿಸಿದರು.




