Ad imageAd image

ಅನ್ನದಾಸೋಹ , ಉಚಿತ ಆಂಬ್ಯುಲೆನ್ಸ್‌ ನಿಸ್ವಾರ್ಥ ಸೇವೆಗೆ ಒಂದು ವರ್ಷ ತುಂಬಿದ ಹರುಷ ನನಗಿದೆ ರವಿ ಪೂಜಾರಿ.

Bharath Vaibhav
ಅನ್ನದಾಸೋಹ , ಉಚಿತ ಆಂಬ್ಯುಲೆನ್ಸ್‌ ನಿಸ್ವಾರ್ಥ ಸೇವೆಗೆ ಒಂದು ವರ್ಷ ತುಂಬಿದ ಹರುಷ ನನಗಿದೆ ರವಿ ಪೂಜಾರಿ.
WhatsApp Group Join Now
Telegram Group Join Now

ಅಥಣಿ:- ಆರ್‌.ಎಸ್.ಪಿ. ಸಮೂಹ ಸಂಸ್ಥೆ ಹಾಗೂ ಸುವರ್ಣ ಕರ್ನಾಟಕ ಸಂಘದ ಅಧ್ಯಕ್ಷರು ಸಮಾಜ ಸೇವಕರಾದ ರವಿ ಪೂಜಾರಿ ಅವರು ಕಳೆದ ಒಂದು ವರ್ಷದಿಂದ ಅಥಣಿ ಪಟ್ಟಣದಲ್ಲಿ ಬಡವರಿಗೆ ಅನ್ನದಾಸೋಹ, ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್‌ ಸೇವೆ ಪ್ರಾರಂಭಿಸಿದ ಹರ್ಷ ನನಗಿದೆ ಎಂದರು.

ಅವರು ಆರ್‌ಎಸ್‌ಪಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಒಂದು ವರ್ಷದಿಂದ ಬಡವರಿಗೆ ಅನ್ನದಾಸೋಹ ಹಾಗೂ ಬಡವರಿಗೆ ಉಚಿತ ಅಂಬುಲೆನ್ಸ್ ಮಾಡಿದ ಹರ್ಷ ನನಗಿದೆ ಮುಂದೆ ಹೀಗೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು

ಪ್ರತಿದಿನ ಮಧ್ಯಾಹ್ನ ನನ್ನ ಸ್ವ ಗೃಹದಲ್ಲಿ ಆಹಾರ ತಯಾರಿಸಿ ಸಂಚಾರಿ ವಾಹನದಲ್ಲಿ ತೆಗೆದುಕೊಂಡು ಹೋಗಿ ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಹಾಗೂ ಬಸ್‌ ನಿಲ್ದಾಣ ನಿರ್ಗಿತ ಪ್ರದೇಶಗಳಲ್ಲಿನ ಬಡ ಜನರಿಗೆ ಊಟ ನೀಡುತ್ತಾ ಬಂದಿದ್ದೇವೆ ಅದರ ಶ್ರೇಯಸ್ಸು ಸಿಬ್ಬಂದಿ ವರ್ಗಕ್ಕೂ ಕೂಡ ಸಲ್ಲುತ್ತದೆ .ದೇವರು ನನಗೆ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ತುಂಬಲಿ ಎಂದರು.ಈ ಸಂದರ್ಭದಲ್ಲಿ ಅಪ್ಪಾಸಾಬ ಅಲಿಬಾದಿ ಪ್ರಕಾಶ್ ಹಿಡಕಲ್ ಮಲ್ಲಪ್ಪ ಮಗದುಮ್ ಅಣ್ಣಸಾಬ ತೆಲಸಂಗ ಇನ್ನಿತರರು ಉಪಸ್ಥಿತರಿದ್ದರು

ವರದಿ: ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!