ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಚಿಟಗುಪ್ಪ : ಹುಮನಾಬಾದ ಟಿಎಪಿಸಿಎಂಎಸ್ ನಿರ್ದೇಶಕ ಸ್ಥಾನಕ್ಕೆ ರವೀಂದ್ರ ಪಾವಡಶೆಟ್ಟಿ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ
ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಪಾವಡಶೆಟ್ಟಿ ಪರಿವಾರಿಂದ ಸಂಭ್ರಮಾಚರಣೆ ಮಾಡಲಾಯಿತು.
ನೂತನ ನಿರ್ದೇಶಕ ರವೀಂದ್ರ ಪಾವಡಶೆಟ್ಟಿ ಅವರಿಗೆ ಗ್ರಾಮಸ್ಥರಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಬಳಿಕ ರವೀಂದ್ರ ಪಾವಡಶೆಟ್ಟಿ ಅವರು pkps ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸರ್ವ ನಿರ್ದೇಶಕರಿಗೆ ಸನ್ಮಾನಿಸಿ ಧನ್ಯವಾದಗಳು ತಿಳಿಸಿ ಮಾತನಾಡಿದರು.
ಸಾಮನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಟಿಎಪಿಸಿಎಂಎಸ್ ನಿರ್ದೇಶಕನಾಗಿ ಮಾಡಿದ್ದಾರೆ. ಹಿಂದೆ ನಮ್ಮ ಸಹೋದರ ದಿವಂಗತ ಸುಭಾಸ್ ಚಂದ್ರ ಪಾವಡಶೆಟ್ಟಿ ಅವರಿಗೆ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಮಾಡಿದ್ದರು.ಇಂದು ಪುನಃ ನನಗೆ ಅವಕಾಶ ಕೊಟ್ಟಿದ್ದು ಯಾವತ್ತೂ ಮರೆಯುವಂತಿಲ್ಲ.
ತಾಳಮಡಗಿ ಗ್ರಾಮಕ್ಕೆ ರಾಜಶೇಖರ್ ಪಾಟೀಲ್ ಕೊಡುಗೆ ಬಹಳಷ್ಟಿದೆ.ಅದನ್ನು ಯಾರು ಅಲ್ಲಗಳಿಯುವಂತಿಲ್ಲ ಎಂದು ಹೇಳಿದರು.
ವರದಿ : ಸಜೀಶ ಲಂಬುನೋರ್




