ಬೈಲಹೊಂಗಲ: ಜನವರಿ ೧೨ ಹಾಗೂ ೧೩ ರಂದು ಎರಡು ದಿನಗಳವರೆಗೆ ನಡೆಯುವ ಸಂಗೊಳ್ಳಿ ರಾಯಣ್ಣ ಉತ್ಸವ ಹಿನ್ನೆಲೆಯಲ್ಲಿ ಈಚೆಗೆ ತಾಲೂಕಿನ ಸಂಗೊಳ್ಳಿಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಅವರ ನೇತೃತ್ವದಲ್ಲಿ ಪರ‍್ವಭಾವಿ ಸಭೆ ಜರುಗಿತು.
ಪ್ರತಿ ರ‍್ಷದಂತೆ ಈ ರ‍್ಷವೂ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನರ‍್ಧರಿಸಲಾಗಿದ್ದು, ಸಂಗೊಳ್ಳಿ ರಾಯಣ್ಣ ಉತ್ಸವದ ಮಹತ್ವವನ್ನು ನಾಡಿಗೆ ತಿಳಿಸುವುದು ಹಾಗೂ ರಾಯಣ್ಣನ ದೇಶ ಪ್ರೇಮದ ಕುರಿತು ಜಾಗೃತಿ ಮೂಡಿಸುವುದು ಉತ್ಸವದ ಉದ್ದೇಶ ಎಂದು ಶಾಸಕ ಮಹಾಂತೇಶ ಕೌಜಲಗಿ ನುಡಿದರು.
ಉತ್ಸವಕ್ಕೆ ಪ್ರಸಿದ್ದ ಜಾನಪದ ಕಲಾ ತಂಡಗಳು ಆಗಮಿಸಲಿವೆ. ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಉತ್ಸವಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು ಎಂದು ಮಹಾಂತೇಶ ಕೌಜಲಗಿ ಹೇಳಿದರು.
ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಮಾತನಾಡಿ ಉತ್ಸವದ ಸಿದ್ದತೆಗಳ ಬಗ್ಗೆ ವಿವರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಚಚಡಿ, ಮಹಾಂತೇಶ ಕಳ್ಳಿಬಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನರ‍್ಧೇಶಕಿ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಡಿವೈಎಸ್‌ಪಿ ವೀರಯ್ಯ ಹಿರೇಮಠ, ತಹಸೀಲ್ದಾರ ಹನಮಂತ ಶಿರಹಟ್ಟಿ ಹಾಗೂ ಕಲಗೌಡ ಪಾಟೀಲ್ ಇದ್ದರು.
ಜನವರಿ ೧೨ ರಿಂದ ಎರಡು ದಿನ ಸಂಗೊಳ್ಳಿ ರಾಯಣ್ಣ ಉತ್ಸವ




