ಕಾಗವಾಡ : ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯವಾಗಿ 60:40 ರಡಿ ಕನ್ನಡ ಭಾಷೆ ಇರಬೇಕೆಂಬ ನಿಯಮದ ಸುತ್ತೋಲೆ ಹೊರಡಿಸಿ ಸರ್ಕಾರ ಆದೇಶಿಸಿದೆ ಆದರೆ ಕಾಗವಾಡ ಪಟ್ಟಣದಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಾಗಿದೆ.ಹೌದು ಕನ್ನಡವನ್ನು ಉಳಿಸಿ ಬೆಳೆಸಿದ ಚನ್ನಮ್ಮಳ ವೃತ್ತದಲ್ಲಿಯೇ ಮರಾಠಿಮಯ ಬ್ಯಾನರ್ ಹಾಗೂ ನಾಮಫಲಕಗಳು ರಾರಾಜಿಸುತ್ತಿದ್ದರೂ ಯಾವದೇ ಸಂಘಟನೆಗಳು ಇದರ ಬಗ್ಗೆ ಮೌನ ವಹಿಸಿರುವದು ದುರಾದೃಷ್ಟಕರವಾಗಿದೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಕೆ ಕೆ ಗಾವಡೆ, ಇದರ ಬಗ್ಗೆ ಸೂಕ್ತ ರೀತಿಯ ಕ್ರಮ ಕೈಗೊಂಡು ಎಲ್ಲ ಬ್ಯಾನರ್ ಹಾಗೂ ನಾಮಫಲಕಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಇರುವಂತೆ ಸೂಚನಾ ಫಲಕ ಅಳವಡಿಸಲಾಗುವದು ಎಂದು ಹೇಳಿದ್ದಾರೆ.
ಮರಾಠಿ ಬ್ಯಾನರ್ ಬಗ್ಗೆ ಮಾಹಿತಿ ತರಿಸಿಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವದು.-ರವೀಂದ್ರ ಹಾದಿಮನಿ ತಹಶಿಲ್ದಾರರು ಕಾಗವಾಡ
ಕನ್ನಡ ನೆಲದಲ್ಲಿ ಮರಾಠಿ ಸೇರಿದಂತೆ ಅನ್ಯಭಾಷಾ ಬ್ಯಾನರ್ ಹಾಗೂ ನಾಮಫಲಕಗಳನ್ನ ತೆರವು ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮರಾಠಿ ನಾಮಫಲಕ ಅಳಿಸಿ ಚಳುವಳಿ ಮೂಲಕ ಉಗ್ರ ಹೋರಾಟ ನಡೆಸಬೇಕಾಗುತ್ತದೆ. -ಸಿದ್ದು ಒಡೆಯರ್ ಕರವೇ ಅಧ್ಯಕರು ಕಾಗವಾಡ|
ವರದಿ : ಚಂದ್ರಕಾಂತ ಕಾಂಬಳೆ




