Ad imageAd image

ಆರ್‌ಸಿಬಿ ಸಂಭ್ರಮಾಚರಣೆ ಅವಘಡ : ಇಂದು ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ

Bharath Vaibhav
ಆರ್‌ಸಿಬಿ ಸಂಭ್ರಮಾಚರಣೆ ಅವಘಡ : ಇಂದು ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ
HIGHCOURT
WhatsApp Group Join Now
Telegram Group Join Now

ಬೆಂಗಳೂರು: ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆಯಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದಂತ ಪ್ರಕರಣ ಸಂಬಂಧ ನಿಖಿಲ್ ಸೋಸಲೆ ಎಂಬುವರನ್ನು ಬಂಧಿಸಲಾಗಿತ್ತು. ಈ ಬಂಧನ ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ಬಂಧನಕ್ಕೆ ಒಳಗಾದವರ ಅರ್ಜಿಯ ವಿಚಾರಣೆ ಇಂದು ನಡೆಸಲಿದೆ.

ನಿನ್ನೆ ಸಿಸಿಬಿಯು ಅಕ್ರಮವಾಗಿ ತಮ್ಮನ್ನು ಬಂಧಿಸಲಾಗಿದೆ ಎಂಬುದಾಗಿ ಆರ್ ಸಿ ಬಿ ಮ್ಯಾನೇಜರ್ ನಿಖಿಲ್ ಸೋಸಲೆ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ನಿಖಿಲ್ ಸೋಸಲೆ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ಅವರು ವಾದಿಸಿದರು.

ರಾಜ್ಯ ಸರ್ಕಾರ ಸಿಸಿಬಿಯಿಂದ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ದುರಂತ ಪ್ರಕರಣದಲ್ಲಿ ತಮ್ಮ ಕಕ್ಷಿದಾರರನ್ನು ಬಂಧಿಸಲಾಗಿದೆ.

ಇದು ಕಾನೂನು ಉಲ್ಲಂಘಿಸಿ ಬಂಧಿಸಿದಂತ ಬಂಧನವಾಗಿದೆ. ನಿಖಿಲ್ ಸೋಸಲೆಗೆ ಮಧ್ಯಂತರ ಜಾಮೀನು ನೀಡುವಂತೆ ಹೈಕೋರ್ಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ವೇಳೆ ಹೈಕೋರ್ಟ್ ನಿಖಿಲ್ ಸೋಸಲೆಯನ್ನು ಬಂಧಿಸುವಂತ ಅಧಿಕಾರ ಸಿಸಿಬಿಗೆ ಇತ್ತೆ ಎಂಬುದಾಗಿ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದಂತ ಎಜೆ ದೇಶ ತೊರೆಯುತ್ತಿದ್ದಾಗ ಬಂಧಿಸಲಾಗಿದೆ.

ಇದಕ್ಕೆ ಸೂಕ್ತ ಲಿಖಿತ ಉತ್ತರ ನೀಡಲಾಗುತ್ತದೆ. ಹೀಗಾಗಿ ನಿಖಿಲ್ ಸೋಸಲೆಗೆ ಮಧ್ಯಂತರ ಜಾಮೀನು ನೀಡದಂತೆ, ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಆರ್ ಸಿ ಬಿ ಪರ ಹಿರಿಯ ವಕೀಲ ವಿ.ನಾಗೇಶ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ವಿಜಯೋತ್ಸವ ಸಂಭ್ರಮಾಚರಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ಆಹ್ವಾನಿಸಲಾಗಿತ್ತು ಎಂಬುದಾಗಿ ಹೈಕೋರ್ಟ್ ನ್ಯಾಯಪೀಠದ ಗಮನಕ್ಕೆ ತಂದರು.

ನಿಖಿಲ್ ಸೋಸಲೆ ಪರ ವಕೀಲರು, ಆರ್ ಸಿ ಬಿ ಪರ ವಕೀಲರು ಹಾಗೂ ಸರ್ಕಾರದ ಪರ ಎಜೆ ವಾದ ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಬಂಧನಕ್ಕೊಳಗಾದವರು ಪ್ರಕರಣ ರದ್ದು, ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿಕೆ ಮಾಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!