
ಮಲ್ಲಮ್ಮನ ಬೆಳವಡಿ: RCB ಗಣಪ ಆರ್‌ಸಿಬಿ, ಆರ್‌ಸಿಬಿ,ಎಲ್ಲಿ ನೋಡಿದರೂ ಆರ್‌ಸಿಬಿ ಕ್ರೇಜ್ ಹೆಚ್ಚುತ್ತಲೇ ಇದೆ, ಇದಕ್ಕೆಲ್ಲಾ ಕಾರಣ ಐಪಿಎಲ್ ಚಾಂಪಿಯನ್ RCB ಅಭಿಮಾನಿಗಳು ತಮಗೆ ಬೇಕಾದ ರೀತಿಯಲ್ಲಿ ಅಭಿಮಾನ ತೋರುತ್ತಿದ್ದಾರೆ ಅದಕ್ಕೆ ಉದಾಹರಣೆ ಆರ್‌ಸಿಬಿ ಗಣಪ ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಆರ್ ಸಿ ಬಿ ಅಭಿಮಾನಿಗಳಾದ ಚಂದ್ರು ಮೆಕ್ಕೇದ, ಹಾಗೂ ರಾಮಲಿಂಗಪ್ಪ ಮೆಕ್ಕೇದ,ಸಹೋದರರು ಐಪಿಎಲ್ ಟ್ರೋಫಿ ಹೊಸ ಗಣೇಶ ವಿಗ್ರಹವನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ ಆರ್‌ಸಿಬಿ ಗೆಳೆಯರ ಬಳಗವನ್ನು ಕಟ್ಟಿಕೊಂಡು ಊರಿನ ಯಾವುದೇ ಕಾರ್ಯಕ್ರಮ ಇದ್ದರು ತಮ್ಮದೇ ಸೇವೆ ಸಲ್ಲಿಸುತ್ತಿರುವ ಸಹೋದರರು ಸಾಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ, ಇವರ ಗೆಳೆಯರ ಬಳಗದಿಂದ ಇಂತಹ ಸೇವಾ ಕಾರ್ಯ ನಿರಂತರ ಸಾಗಲಿ ಎಂಬುದೇ ಗ್ರಾಮಸ್ಥರ ಹಾರೈಕೆಯಾಗಿದೆ.
ವರದಿ: ದುಂಡಪ್ಪ ಹೂಲಿ




