ದೆಹಲಿ: ಕೃನಾಲ್ ಪಾಂಡ್ಯಾ ಹಾಗೂ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗಳ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಾನಾಡಿರುವ 10 ಪಂದ್ಯಗಳಿಂದ 7 ರಲ್ಲಿ ಗೆದ್ದು 14 ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿಯಿತು. ಈ ಬಾರಿಯ ಐಪಿಎಲ್ ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಭರವಸೆ ಮೂಡಿಸುತ್ತಿದೆ ಎಂದು ಅಭಿಮಾನಿಗಳಿಗೆ ಅನಿಸಲಾರಂಭಿಸಿದೆ.
ಸ್ಕೋರ್ ವಿವರ:
ದೆಹಲಿ ಕ್ಯಾಪಿಟಲ್ಸ್ 8 ವಿಕೆಟ್ ಗೆ 162
ಕೆ.ಎಲ್ ರಾಹುಲ್ 41 ( 39 ಎಸೆತ, 3 ಬೌಂಡರಿ)
ಸ್ಟಬ್ಸ್ 34 ( 18 ಎಸೆತ, 5 ಬೌಂಡರಿ, 1 ಸಿಕ್ಸರ್), ಅಭಿಷೇಕ ಪೊರೆಲ್ 28 (11 ಎಸೆತ, 2 ಬೌಂಡರಿ,2 ಸಿಕ್ಸರ್)
ಭುವನೇಶ್ವರ ಕುಮಾರ 33 ಕ್ಕೆ 3, ಹೆಜಲ್ ವುಡ್ 36 ಕ್ಕೆ 2)
ರಾಯಲ್ ಚಾಲೆಂಜರ್ಸ್ ಬೆಂಗಳೂರು 18.3 ಓವರುಗಳಲ್ಲಿ 4 ವಿಕೆಟ್ ಗೆ 165
ವಿರಾಟ್ ಕೊಹ್ಲಿ 51 ( 47 ಎಸೆತ, 4 ಬೌಂಡರಿ), ಕೃನಾಲ್ ಪಾಂಡ್ಯಾ 73 ( 47 ಎಸೆತ, 5 ಬೌಂಡರಿ, 4 ಸಿಕ್ಸರ್)
ಅಕ್ಷರ ಪಟೇಲ್ 19 ಕ್ಕೆ 2)
ಪಂದ್ಯ ಶ್ರೇಷ್ಠ: ಕೃನಾಲ್ ಪಾಂಡ್ಯಾ