Ad imageAd image

ಐಪಿಎಲ್: ಸಿಎಸ್ ಕೆ ವಿರುದ್ಧ ಗೆಲ್ಲಲು ಆರ್ ಸಿಬಿ ಯೋಜನೆ  

Bharath Vaibhav
WhatsApp Group Join Now
Telegram Group Join Now

ಐಪಿಎಲ್​ 2025ರ ಬಹುನಿರೀಕ್ಷಿತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ (CSK) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ತಮಿಳುನಾಡಿನ ಎಂ.ಎ.ಚಿದಂಬರಂ ಮೈದಾನದಲ್ಲಿ ಇತ್ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ.

ಕಳೆದ ಆವೃತ್ತಿಯಲ್ಲಿ ಸಿಎಸ್​ಕೆಯನ್ನು ಬಗ್ಗು ಬಡಿದು ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದ ಆರ್​ಸಿಬಿ, ಈ ಪಂದ್ಯದಲ್ಲೂ ರುತುರಾಜ್​ ಗಾಯಕ್ವಾಡ್​ ಪಡೆಯನ್ನು ಮಣಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

RCB vs CSK ಹೆಡ್ಟು ಹೆಡ್​: ಉಭಯ ತಂಡಗಳು ಐಪಿಎಲ್​ನಲ್ಲಿ ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಚೆನ್ನೈ 21 ಪಂದ್ಯಗಳಲ್ಲಿ ಗೆದ್ದು ಆರ್​ಸಿಬಿ ಮೇಲೆ ಪ್ರಾಬಲ್ಯ ಸಾಧಿಸಿದೆ. ಮತ್ತೊಂದೆಡೆ ಆರ್​ಸಿಬಿ ಕೇವಲ 11 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ.

ಚೆಪಾಕ್ನಲ್ಲಿ ಆರ್ಸಿಬಿ ದಾಖಲೆ: ಚೆಪಾಕ್‌ನಲ್ಲಿ​ ಎರಡೂ ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಆದರೆ ಈ ಮೈದಾನದಲ್ಲಿ ಆರ್​ಸಿಬಿ ಅತಿ ಕೆಟ್ಟ ದಾಖಲೆ ಹೊಂದಿದೆ. ಐಪಿಎಲ್​ ಚೊಚ್ಚಲ ಆವೃತ್ತಿಯಲ್ಲಿ ಅಂದರೆ 2008ರಲ್ಲಿ ಚೆನ್ನೈ ತಂಡವನ್ನು ಮಣಿಸಿತ್ತು. ಇದಾದ ನಂತರ ಆರ್‌ಸಿಬಿ ತಾನಾಡಿದ 8 ಪಂದ್ಯಗಳಲ್ಲಿ ಒಮ್ಮೆಯೂ ಗೆದ್ದಿಲ್ಲ.

ಇದೀಗ 17 ವರ್ಷಗಳ ಬಳಿಕ ಚೆನ್ನೈ ತಂಡವನ್ನು ಚೆಪಾಕ್​ ಮೈದಾನದಲ್ಲಿ ಮಣಿಸಲು ಆರ್​ಸಿಬಿ ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದ್ದು, ಸಮತೋಲಿನ ತಂಡವನ್ನು ಆಯ್ಕೆ ಮಾಡಲು ಮುಂದಾಗಿದೆ.

WhatsApp Group Join Now
Telegram Group Join Now
Share This Article
error: Content is protected !!