
ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತೇ ಐಪಿಎಲ್ ಪಂದ್ಯಗಳನ್ನು ನಡೆಸುವ ಅವಕಾಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿ ಕೂಡ ತವರು ನೆಲದಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿಕೊಂಡಿದೆ.
ನಿನ್ನೆ ಸಂಜೆ ೪:೩೦ ರಿಂದ ೬:೩೦ ರವರೆಗೆ ಆರ್ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು. ಕೆಲವೇ ಕೆಲವು ಕ್ರಿಕೆಟ್ ಅಭಿಮಾನಿಗಳಾದರೂ ಪರವಾಗಿಲ್ಲ. ಕ್ರಿಕೆಟ್ ಜ್ಞಾನವಿರುವ ಕ್ರಿಕೆಟ್ ಅಭಿಮಾನಿಗಳನ್ನು ಅಭ್ಯಾಸಕ್ಕೆ ಬಂದ ಆರ್ಸಿಬಿ ಆಟಗಾರರನ್ನು ಸ್ವಾಗತಿಸಿದರು.
ನಿನ್ನೆ ಸಂಜೆ ಮಳೆಯ ಕಾರಣ ಬೇಗನೆ ಅಭ್ಯಾಸ ಮುಗಿಸಿದ ಆಟಗಾರರು ಡ್ರೆಸಿಂಗ್ ರೂಂ ಹಾದಿ ಹಿಡಿಯಬೇಕಾಯಿತು. ಒಟ್ಟಿನಲ್ಲಿ ವಿರಾಟ್ ಕೊಹ್ಲಿ, ಆರ್ಸಿಬಿ ಹಾಗೂ ಐಪಿಎಲ್ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಿದಂತಾಗಿದೆ.




