ಬೆಂಗಳೂರು: ಅತ್ಯುತ್ತಮ ಆರಂಭದ ನಂತರವೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ 164 ರನ್ ಗಳ ಗುರಿಯನ್ನು ಮಾತ್ರ ನೀಡಲು ಯಶಸ್ವಿಯಾದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಗೆ 163 ರನ್ ಗಳಿಸಿತು. ತಂಡದ ಆರಂಭ ಭರ್ಜರಿಯಾಗಿತ್ತು. ಕೇವಲ 2.5 ಓವರುಗಳಲ್ಲಿ ಮೊದಲ 50 ರನ್ ಗಳಿಸಿದ ತಂಡವು ಕೋಹ್ಲಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಪಿಲಿಪ್ ಸಾಲ್ಟ್ ರನ್ ಔಟ್ ನಂತರ ತೀವ್ರ ಕುಸಿತ ಕಂಡಿತು. ನಿರಂತರ ವಿಕೆಟ್ ಗಳನ್ನು ಕಳೆದುಕೊಳ್ಳುತ್ತ ಹೋಗಿ ಅಲ್ಪ ಮೊತ್ತಕ್ಕೆ ಸಮಾಧಾನ ಪಡಬೇಕಾಯಿತು.
ಪಿಲಪ್ ಸಾಲ್ಟ್ 17 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಕೊನೆಯಲ್ಲಿ ಟಿಮ್ ಡೆವಿಡ್ 20 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ನೆರವಿನಿಂದ 37 ರನ್ ತಂದಿದ್ದರಿಂದ ತಂಡ ಸಾಧಾರಣ ಮೊತ್ತವನ್ನಾದರೂ ತಲುಪುವಂತಾಯಿತು.