Ad imageAd image

IPL ಟ್ರೋಫಿ ಗೆದ್ದ ಆರ್.ಸಿ.ಬಿ:  ವಡಾ-ಪಾವ ವಿತರಿಸಿದ ಅಭಿಮಾನಿ

Bharath Vaibhav
IPL ಟ್ರೋಫಿ ಗೆದ್ದ ಆರ್.ಸಿ.ಬಿ:  ವಡಾ-ಪಾವ ವಿತರಿಸಿದ ಅಭಿಮಾನಿ
WhatsApp Group Join Now
Telegram Group Join Now

ಚಿಕ್ಕೋಡಿ: ಆರ್.ಸಿ.ಬಿ ಹಾಗೂ ಪಂಜಾಬ ಕಿಂಗ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಆರ್.ಸಿ.ಬಿ ಗೆದ್ದರೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡುತ್ತೇನೆ ಎಂದಿದ್ದ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಮಹಾಲಕ್ಷ್ಮೀ ವಡಾ-ಪಾವ ಅಂಗಡಿಯ ಮಾಲಿಕ ನಾಗೇಶ ಮಂಗುಟೆಯವರು ಮಾತು ಕೊಟ್ಟಂತೆ ಉಚಿತವಾಗಿ ವಡಾ-ಪಾವ ವಿತರಿಸುವ ಮೂಲಕ ಆರ್.ಸಿ.ಬಿ ಮೇಲಿನ ಅಭಿಮಾನವನ್ನು ಎತ್ತಿ ತೋರಿಸಿದ್ದಾರೆ.

18 ವರ್ಷಗಳ ಬಳಿಕ ಆರ್.ಸಿ.ಬಿ ತಂಡವು ಚೊಚ್ಚಲ ಐಪಿಎಲ್ ಕಪ್ ವನ್ನು ತನ್ನ ಮುಡಿಗೆರಿಸಿಕೊಂಡಿದೆ.ಇದರಿಂದಾಗಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಆರ.ಸಿ.ಬಿ‌ ಅಭಿಮಾನಿ‌ ನಾಗೇಶ ಮಂಗುಟೆ ತಮ್ಮ ವಡಾ-ಪಾವ ಅಂಗಡಿಯಲ್ಲಿ ಆರ್.ಸಿ.ಬಿ ಗೆದ್ದರೆ ಉಚಿತವಾಗಿ ವಡಾ-ಪಾವ ನೀಡುವುದಾಗಿ ಘೋಷಿಸಿದರು.ಅದರಂತೆ ಆರ್.ಸಿ.ಬಿ ಫೈನಲ್ ನಲ್ಲಿ ಗೆಲವು ಸಾಧಿಸಿದೆ.

ಕೊಟ್ಟ ಮಾತಂತೆ ನಾಗೇಶ ಮಂಗುಟೆಯವರು ಉಚಿತವಾಗಿ ಸಾಯಂಕಾಲ 4-8 ವರೆಗೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡಿದ್ದಾರೆ. 2500 ಜನರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ.ಜನರು ಸಾಲಿನಲ್ಲಿ ನಿಂತೂ ವಡಾ-ಪಾವ ತಿಂದು ನಾಗೇಶಯವರ ಅಭಿಮಾನವನ್ನು ಹಾಡಿಹೊಗಳಿದ್ದಾರೆ.

ಇದೇ ಸಂಧರ್ಭದಲ್ಲಿ ನಾಗೇಶ ಮಂಗಟೆಯವರು ಮಾತನಾಡಿ ನಾನು ಮೊದಲನಿಂದಲೂ ಆರ್.ಸಿ.ಬಿ ತಂಡದ ಅಭಿಮಾನಿ ರಾಹುಲ್ ದ್ರಾವಿಡ ಹಿಡಿದು ವಿರಾಟ ಕೊಹ್ಲಿಯವರ ಪಕ್ಕಾ ಅಭಿಮಾನಿ ನಾನು‌.ಆರ್.ಸಿ.ಬಿ ಟ್ರೋಫಿ ಗೆದ್ದರೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡುವದಾಗಿ ಹೇಳಿಕೊಂಡಿದೆ.ಅದರಂತೆ ಇವತ್ತು ಉಚಿತವಾಗಿ ವಡಾ-ಪಾವ ವಿತರಣೆ ಮಾಡಿದೇನೆ ಎಂದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!