ಗೋಕಾಕ : 18 ವರ್ಷಗಳ ನಂತರ IPL ಕ್ರೀಕೇಟ್ ಪೈನಲಗೆ ತಲುಪಿದ ಆರ್,ಸಿ,ಬಿ, ತಂಡ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸದೊಂದಿಗೆ ಗೋಕಾಕ_ ತಾಲೂಕಿನ ಕೊಣ್ಣೂರಲ್ಲಿನ ಆಚಾರ್ಯ ಶ್ರೀಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಆರ್,ಸಿ,ಬಿ,ಈ ಸಲ ಕಪ್ ಗೆದ್ದೆ ತರುತ್ತದೆ ಎಂದು ಆರ್,ಸಿ,ಬಿ, ಟೀ ಶರ್ಟ್, ಕಪ್ ಮತ್ತು ಬ್ಯಾಟ ಬಾಲಗೆ ಶಿಕ್ಷಕಿಯರು, ವಿದ್ಯಾರ್ಥಿಗಳು ಪೂಜೆ ನೇರವರಿಸಿದರು.
ರಾಜ್ಯಾದೆಲ್ಲಡೆ ಆರ್,ಸಿ,ಬಿ, ವಿಜಯಶಾಲಿ ಆಗಲಿ ಈ ಸಲ ಕಪ್ ಗೆಲ್ಲಲೆಬೇಕೆಂದು ಪೂಜೆಗಳು ,ಹೊಮ ಹವನ ಎಲ್ಲಡೆ ನಡೆಯುತ್ತಲಿವೆ.ಆದರೆ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟ ಕೊಣ್ಣೂರಿನ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈ ಸಲ ಕಪ್ ಆರ್,ಸಿ,ಬಿದೆ, ಈ ಸಲ ಆರ್,ಸಿ,ಬಿ,ನೇ ಹೀರೋ ಎಂದು ವಿಜಯಶಾಲಿಯಾಗಿ ಕಪ್ ಗೆದ್ದಿದೆ ಎಂದು ಪಟಾಕಿ ಹಚ್ಚಿ ಸಿಹಿ ಹಂಚಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಪುಟ್ಟ ವಿದ್ಯಾರ್ಥಿಗಳಂತೂ ಹಣೆಯ ಮೇಲೆ ಆರ್,ಸಿ,ಬಿ, ಬರೆಯಿಸಿಕೊಂಡು, ಈ ಸಲ ಕಪ್ ನಮದೆ ಎಂದು ಆರ್,ಸಿ,ಬಿ ಗೆ ಜೈಕಾರ ಹಾಕಿದರು, ಒಟ್ಟಾರೆಯಾಗಿ ಒಂದು ಕಡೆ ಆರ್,ಸಿ,ಬಿ, ಗೆದ್ದು ಬರಲೆಂದು ಪೂಜೆ ಮಾಡುತಿದ್ದರೆ ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಆರ್,ಸಿ,ಬಿ,ಗೆದ್ದು ಕಪ್ ತಂದಿದ್ದಾರೆ ಎಂಬ ಖುಷಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯರು ಸಿಹಿ ಹಂಚಿದ್ದು ಆಟಗಾರರ ಮೇಲೆ ಇಟ್ಟ ವಿಶ್ವಾಸ, ಅಭಿಮಾನ ಎತ್ತಿ ತೊರಿದೆ.
ವರದಿ : ಮನೋಹರ ಮೇಗೇರಿ




