Ad imageAd image

ಹೂಡ ಬಿ ಗ್ರಾಮದಲ್ಲಿ ಶುದ್ಧ ನೀರಿ ಘಟಕ ಮರು ಸ್ಥಾಪನೆ.

Bharath Vaibhav
ಹೂಡ ಬಿ ಗ್ರಾಮದಲ್ಲಿ ಶುದ್ಧ ನೀರಿ ಘಟಕ ಮರು ಸ್ಥಾಪನೆ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಹೂಡ ಬಿ ಗ್ರಾಮದಲ್ಲಿ ಇತ್ತೀಚಿಗೆ ಅಶುದ್ಧ ನೀರು ಸರಬರಾಜು ಆಗಿರುವ ನೀರನ್ನು ಗ್ರಾಮಸ್ಥರು ಸೇವಿಸುತ್ತಿರುವದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶುದ್ಧ ಕುಡಿಯುವ ನೀರಿನ ಘಟಕ ಮರು ಸ್ಥಾಪನೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರ ಸೂಚನೆಯ ಮೇರೆಗೆ ತಕ್ಷಣ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡಿ ಕಲುಷಿತ ನೀರಿಗೆ ಮುಕ್ತಾಯ ನೀಡಿದಂತಾಗಿದೆ ಎಂದು ಮಳಖೇಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೆನ್ನಯ್ಯ ಪುರಾಣಿಕ್ ಅವರು ಶುದ್ಧ ಕುಡಿಯುವ ನೀರಿನ ಘಟಕ ಮರು ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜಾಹೀರೊದ್ದೀನ್, ಹಣಮಂತ ಇಟಗಿ, ಮಲ್ಲಿಕಾರ್ಜುನ್ ವಡೇರಾಜ, ನಾಗಪ್ಪ, ಮಹಾಂತೇಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!