ರಾಯಬಾಗ: ತಾಲೂಕಿನಲ್ಲಿ ಧರ್ಮನಗರಿ ಎಂದು ಅನಿಸಿಕೊಂಡ ನಸಲಾಪುರ ಗ್ರಾಮದಲ್ಲಿ ಪರಮ ಪೂಜ್ಜ್ಯ ಆಚಾರ್ಯ ರತ್ನ ಬಾಹುಬಲಿ ಮುನಿ ಮಹಾರಾಜರ ಪರಮ ಶಿಷ್ಯರಾದ ಪರಮಪೂಜ್ಯ ಬಾಲಾಚಾರ್ಯ 108 ಡಾಕ್ಟರ್ ಶ್ರೀ ಸಿದ್ದಸೇನ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ. ಹಾಗೂ ಭರತೇಶ ಶಾಂತಪ್ಪ ಭನವಾಣೆ ಇವರ ಸಮ್ಮುಖದಲ್ಲಿರಾಜ್ಯಮಟ್ಟದ ಜೈನ ಪಂಡಿತರು.ಲೇಖಕರು. ಸಾಹಿತ್ಯ ಕಾರರು. ಸಂಗೀತ ಕಾರರ ಸಮಾವೇಶ ನಡೆಯಿತು.ಮತ್ತು ಈ ಸಂದರ್ಭದಲ್ಲಿ ಇಂಜಿನಿಯರ್ ಗಳಿಗೂ ಕೂಡಾ ಸತ್ಕಾರ್ ಮಾಡಲಾಯಿತು.
ಹಾಗೂ ಈ ಸಂದರ್ಭದಲ್ಲಿ ಮಾತನಾಡಿದ ಪಂಡಿತರೋಬ್ಬರು ಈ ಸಮಾಜದಲ್ಲಿ ಪುರೋಹಿತರಿಗೆ ಅತ್ಯಂತ ಗೌರವ ಸ್ಥಾನವಿದೆ. ಹಾಗೂ ಪಂಡಿತರು ತಮ್ಮ ಮನೆಯ ಕೆಲಸವನ್ನು ಬದಿಗಿಟ್ಟು ಸಮಾಜದ ಹಾಗೂ ಮಂದಿರದ ಏಳಿಗೆಗಾಗಿ ತುಂಬಾ ಶ್ರಮ ಪಡುತ್ತಾರೆ. ಎಂದು ಹೇಳಿದರು.
ಮತ್ತು ಗಾಯಕರು ಹಾಗೂ ಸಂಗೀತಕಾರರು ಕೂಡ ಮಾತನಾಡಿ ಗಾಯಕರು ದೈವಿಕ ಮಾರ್ಗದ ದೂತರು. ಗಾನವಿಲ್ಲದ ಜೀವನ ಭಾವವಿಲ್ಲದ ಬದುಕು. ಅಂತಹ ಭಾವಗಳನ್ನಅರಿತ ಜೀವನಕ್ಕೆ ಗಾಯಕರು ಜೀವದಾನ ನೀಡುತ್ತಾರೆ.ಮತ್ತು ಸಂಗೀತವೆಂದರೆ ಕೇವಲ ಶಬ್ದಗಳಲ್ಲ ಅದು ಮನಸ್ಸಿನ ಮಾತು ಗೆಲ್ಲುವ ಶಕ್ತಿ ಯಾರಿಗಿದೆಯೋ ಅವರೇ ನಿಜವಾದ ಕಲಾವಿದರು. ಎಂದು ಹೇಳಿದರು.ಮತ್ತು ಈ ಸಂದರ್ಭದಲ್ಲಿ ಡಾಕ್ಟರ್ ರಾಜಕುಮಾರ ಅವರನ್ನ್ನು ಕೂಡ ನೆನಪಿಸಲಾಯಿತು.
ಹಾಗೂ ಪರಮಪೂಜ್ಯ ಡಾಕ್ಟರ್ ಸಿದ್ದ ಸೇನಾ ಮುನಿ ಮಹಾರಾಜರು ತಮ್ಮ ಪ್ರವಚನದಲ್ಲಿ ಮಾತನಾಡಿ ಪಂಡಿತರು ಸಮಾಜಕ್ಕೆ ಒಳ್ಳೆಯ ಮಾರ್ಗವನ್ನು ನೀಡಬೇಕು.ಮತ್ತು ಜನರಿಗೆ ಮನಸ್ಸಿನಲ್ಲಿ ನೀವು ಉಳಿಯುವಂತೆ ಮಾಡಬೇಕು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಮತ್ತು ಪೂಜಾ ವಿಧಿ ವಿಧಾನಗಳನ್ನು ಸರಿಯಾಗಿ ಮಾಡಿ. ಮತ್ತು ಯಾವ ಕೆಟ್ಟ ವ್ಯಸನಗಳಿಗೆ ಬಲಿಯಾಗದಿರಿ ಎಂದುಪೂಜ್ಯರು ಮನಮುಟ್ಟುವಂತೆ ಮಾತನಾಡಿದರು.
ಈ ಸಮಾವೇಶದಲ್ಲಿ ವಿಶೇಷವೇನೆಂದರೆ ನಸಲಾಪುರ ಗ್ರಾಮದ ಶ್ರೀ ಕಾರ್ತಿಕ ಅಜಿತಕುಮಾರ ಪಾಟೀಲ ಈತನು ತನ್ನ 19 ನೇ ವಯಸ್ಸಿನಲ್ಲಿ ದೇಶಕ್ಕೆ 175ನೇ ರಾಂಕ್ ಪಡೆದು ಭಾರತೀಯ ವಾಯು ಸೇನೆಗೆ ಆಯ್ಕೆಯಾಗಿ ಗ್ರಾಮಕ್ಕೆ ಕಿರ್ತಿ ತಂದಿದ್ದಾನೆ. ಈತನಿಗೆ ಎಲ್ಲರೂ ಶುಭ ಹಾರೈಸಿ ಸಮಾವೇಶದಲ್ಲಿ ಸತ್ಕಾರ ಮಾಡಲಾಯಿತು.ಮತ್ತು ಶರದ ಪಾಟೀಲ
ಮಹಾವೀರ ಪರಮಾಜೆ,ಕುಮಾರ ಕಾಗವಾಡೆ,ಅಣ್ಣಾಸಾಬ ಮೀಳವಂಕೆ,ಮಹಾವೀರ,ಕೀರಣ ಸಮಾಜೆ
ಹಾಗೂ ಕೆಲವು ಪಂಡಿತರು ಸೇರಿ ಸಮಾವೇಶವನ್ನು ಚೆನ್ನಾಗಿ ನಡೆಸಿಕೊಟ್ಟರು.
ವರದಿ: ಭರತ ಮುರಗುಂಡೆ




