Ad imageAd image

ರಿಕಾನ್ ಎಕ್ಸ್‌ಪೋ 2026 ಜ 9 ರಿಂದ‌ ಆರಂಭ

Bharath Vaibhav
ರಿಕಾನ್ ಎಕ್ಸ್‌ಪೋ 2026 ಜ 9 ರಿಂದ‌ ಆರಂಭ
WhatsApp Group Join Now
Telegram Group Join Now

ಹುಬ್ಬಳ್ಳಿ:ಕ್ರೆಡಾಯ್ ಹುಬ್ಬಳ್ಳಿ-ಧಾರವಾಡ ವತಿಯಿಂದ‌ ಜ.9ರಿಂದ 11ರ ವರೆಗೆ ಉತ್ತರ ಕರ್ನಾಟಕದ ಅತಿದೊಡ್ಡ ರಿಯಲ್ ಎಸ್ಟೇಟ್, ಒಳಾಂಗಣ ವಿನ್ಯಾಸ ಮತ್ತು ನಿರ್ಮಾಣ ಸಾಮಗ್ರಿಗಳ ಪ್ರದರ್ಶನ ‘ರಿಕಾನ್ ಎಕ್ಸ್‌ಪೋ 2026’ ಆಯೋಜನೆ ಮಾಡಲಾಗಿದೆ ಎಂದು
ಕ್ರೆಡಾಯ್ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷರಾದ ಶ್ರೀ ಗುರುರಾಜ್ ಎಂ. ಅಣ್ಣಿಗೇರಿ ಹೇಳಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬೃಹತ್ ರಿಯಲ್ ಎಸ್ಟೇಟ್, ಇಂಟೀರಿಯರ್ಸ್ ಮತ್ತು ನಿರ್ಮಾಣ ಸಾಮಗ್ರಿಗಳ ಪ್ರದರ್ಶನವಾದ ‘ರಿಕಾನ್ ಎಕ್ಸ್‌ಪೋ 2026’ ಅನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರದರ್ಶನವು ಜ.9 ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಏರ್‌ಪೋರ್ಟ್ ರಸ್ತೆಯ ದೇಶಪಾಂಡೆ ಸ್ಮಾರ್ಟ್ ಅಪ್ಸ್ ಎದುರು ಉದ್ಘಾಟನೆಗೊಳ್ಳಲಿದ್ದು,
ಜ.9 ರಿಂದ 11ರ ವರೆಗೆ ಮೂರು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 9ರ ವರೆಗೆ ನಡೆಯಲಿದೆ ಎಂದರು.

ರಿಯಲ್ ಎಸ್ಟೇಟ್, ಒಳಾಂಗಣ ವಿನ್ಯಾಸ ಮತ್ತು ನಿರ್ಮಾಣ ಸಾಮಗ್ರಿಗಳ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಈ ಎಕ್ಸಪೋ, ಬಿಯಾಂಡ್ ಬೆಂಗಳೂರು ಕಲ್ಪನೆಯಲ್ಲಿ ಹುಬ್ಬಳ್ಳಿ-ಧಾರವಾಡವನ್ನು ಪ್ರಮುಖ ಹೂಡಿಕೆ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಪ್ರದರ್ಶನವು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಸ್ಯಾಂಡಲ್‌ವುಡ್‌ನ ‘ಡಿಂಪಲ್ ಕ್ಲೀನ್’ ರಚಿತಾ ರಾಮ್ ಹಾಗೂ ಕೇಂದ್ರ ಸಚಿವ ಪಲ್ಮಾದ್ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕ ಪ್ರಸಾದ್ ಅಬ್ಬಯ್ಯ, ವಿಧಾನಸಭೆಯ ಉಪ ವಿರೋಧ ಪಕ್ಷದ ನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ್, ಶಾಸಕ ಮಹೇಶ್ ಟೆಂಗಿನಕಾಯಿ, ಶಾಸಕ ಶ್ರೀನಿವಾಸ್ ಮಾನೆ, ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ್, ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಮತ್ತು ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ ಭಾಸ್ಕರ್ ನಾಗೇಂದ್ರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಪ್ರದರ್ಶನದ ಕುರಿತು ಮಾಹಿತಿ ನೀಡಿದ ರಿಕಾನ್ ಎಕ್ಸ್‌ಪೋ 2026 ರ ಸಂಚಾಲಕ ಇಸ್ಮಾಯಿಲ್ ಸಂಶಿ, ಉತ್ತರ ಕರ್ನಾಟಕದಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ನಿರ್ಮಾಣ ಕ್ಷೇತ್ರದ ಸಂಸ್ಥೆಗಳು ಭಾಗವಹಿಸಲಿವೆ. 150ಕ್ಕೂ ಹೆಚ್ಚು ಮಳಿಗೆಗಳು ಸ್ಥಾಪನೆಯಾಗಲಿವೆ. ಇದರಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳನ್ನೂ ಪ್ರದರ್ಶಿಸಲಾಗುತ್ತಿದೆ. ಮೊದಲ ಬಾರಿಗೆ ಕ್ರೆಡಾಯ್ ಹುಬ್ಬಳ್ಳಿ-ಧಾರವಾಡವು ‘ಯಶ್ ಇವೆಂಟ್ಸ್’ ಸಹಯೋಗದೊಂದಿಗೆ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 150 ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ಈ ಮೆಗಾ ಎಕ್ಸ್ಪೋವನ್ನು ಆಯೋಜಿಸುತ್ತಿದೆ. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳು ಸೇರಿದಂತೆ ಬೆಂಗಳೂರು, ಮೈಸೂರು, ದಾವಣಗೆರೆ ಹಾಗೂ ಮೊದಲ ಬಾರಿಗೆ ದುಬೈ ಮೂಲದ ಪ್ರಾಪರ್ಟಿ ಕನ್ಸಲೆಂಟ್‌ಗಳು ಮತ್ತು ಬಿಲ್ಡರ್‌ಗಳು ಇಲ್ಲಿ ಭಾಗವಹಿಸುತ್ತಿದ್ದಾರೆ. ನಿವೇಶನಗಳು, ಫ್ಲ್ಯಾಟ್‌ಗಳು, ವಾಣಿಜ್ಯ ಮಳಿಗೆಗಳು, ನವೀನ ನಿರ್ಮಾಣ ಸಾಮಗ್ರಿಗಳು ಮತ್ತು ಆಧುನಿಕ ಒಳಾಂಗಣ ವಿನ್ಯಾಸಗಳನ್ನು ಆಕರ್ಷಕ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ ಎಂದರು.

ಕ್ರೆಡಾಯ್ ಚೇರ್ಮನ್ ಶ್ರೀ ಸಂಜಯ್ ಕೊಠಾರಿ ಮಾತನಾಡಿ, ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಅವಳಿ ನಗರಗಳ ನಿವಾಸಿಗಳು ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ಇಂತಹ ಪ್ರದರ್ಶನಗಳು ಅತ್ಯಗತ್ಯ ಎಂದರು.

ವರದಿ:ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!