Ad imageAd image

ದಸಂಸ ತಾಲೂಕ ಸಮಿತಿ ಪುನರಚನೆ

Bharath Vaibhav
ದಸಂಸ ತಾಲೂಕ ಸಮಿತಿ ಪುನರಚನೆ
WhatsApp Group Join Now
Telegram Group Join Now

ಕಾಳಗಿ :ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕ ಸಮಿತಿ ವತಿಯಿಂದ ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಮಿತಿ ಆದೇಶದ ಮೇರೆಗೆ ತಾಲೂಕ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ತಾಲೂಕ ಸಮಿತಿ ಪುನರಚನೆ ಸಭೆಯನ್ನು ಕರೆಯಲಾಯಿತ್ತು, ಮೊದಲಿಗೆ ಡಾ ಬಾಬಾ ಸಾಹೇಬ ಅಂಬೇಡ್ಕರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಈ ಸಭೆಯ ಅಧ್ಯಕ್ಷಯನ್ನು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ರೀನಿವಾಸ್ ಖೇಳ್ಳಗಿ ವಹಿಸಿದರು, ಮುಖ್ಯ ಅತಿಥಿಯಾಗಿ ಸಂಜೀವಕುಮಾರ ಜವಳಕರ್ ಜಿಲ್ಲಾ ಸಂಚಾಲಕರು, ಅತಿಥಿಗಳಾಗಿ ಬಾಬುರಾವ ಶೇಳ್ಳಗಿ, ಮಾರುತಿ ಹುಳಗೊಳಕರ,ಕಪಿಲ್ ಸಿಂದೇ, ವಿಜಯಕುಮಾರ ಸಜ್ಜನ್, ಸೋಮಶೇಖರ ಬೇಡಕಪಳ್ಳಿ, ಪ್ರೇಮ ಮಂತ ಮಹಿಳಾ ಒಕ್ಕೂಟ, ಅವರ ಸಮ್ಮುಖದಲ್ಲಿ ತಾಲೂಕ ಸಮಿತಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು.

ಮಲ್ಲಿಕಾರ್ಜುನ ಗಾವರ ತಾಲೂಕ ಸಂಚಾಲಕರು, ಸಂಘಟನಾ ಸಂಚಾಲಕರಾಗಿ : ಹಣಮಂತ ಕುಡಹಳ್ಳಿ, ಭೀಮಾಶಂಕರ ರೈಕೋಡ ,ಭೀಮರಾಯ ತಾಡಪಳ್ಳಿ, ಪ್ರದೀಪ್, ಗೋಪಾಲ ಮರತೂರ,ಮಾರುತಿ ಜಾಕನಳ್ಳಿ, ಪ್ರಕಾಶ ಕೊಡದೂರ, ಖಜಾಂಚಿ ಯಾಗಿ : ಸೂರ್ಯಕಾಂತ ಮಂತ ಹಾಗೂ ಕಲಾ ಮಂಡಳಿ ಸಂಚಾಲಕರಾಗಿ : ಶ್ರೀನಾಥ ಹುಳಗೇರಾ ಮತ್ತು ಕಾರ್ಯಕಾರಣಿ ಸಮಿತಿ ಸದಸ್ಯರಾಗಿ : ಸಂತೋಷ ತಾಡಪಳ್ಳಿ, ಅರ್ಜುನ್ ಗಾಪನೋರ, ಜಗನಾಥ ರಂಗನೋರ,ಮಾಣಿಕ್ ಕೋಡ್ಲಿ, ವಿದ್ಯಾಸಾಗರ, ಜೈಭೀಮ್ ಭರತನೂರು, ಆಯ್ಕೆ ಆಗಿದ್ದರು.

ಇದೆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪ್ರೊ ಬಿ ಕೃಷ್ಣಪ್ಪ ಅವರಿಂದ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ವರೆಗೆ ಅನೇಕ ಹೋರಾಟಗಳ ಮೂಲಕ ಗೆಲುವು ಸಾಧಿಸಿಕೊಂಡೆ ಬಂದಿದ್ದೆ ಹಾಗೂ ನ್ಯಾಯಯುತವಾಗಿ ಶಿಸ್ತು ಭದ್ಧತೆಯನ್ನು ಕಾಪಾಡಿಕೊಂಡು ಬಂದಿದೆ, ಎಂದು ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಶಿವಪುತ್ರ ಮಾವಿನ ಅವರು ಮಾತನಾಡಿದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!