ಬೆಂಗಳೂರು: -ಪೀಣ್ಯ,ದಾಸರಹಳ್ಳಿ ‘ಮಾಲಿನ್ಯ ಮುಕ್ತ ನಗರವಾಗಿಸುವ ನಿಟ್ಟಿನಲ್ಲಿ ಬಿಎಂಟಿಸಿ ಇವಿ ಬಸ್‌ಗಳನ್ನು ಮಾತ್ರ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆಯಾದ ನಮ್ಮ ಪ್ರೋವಿಜ್ ಮ್ಸಾನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಬೃಹತ್ ನೇಮಕಾತಿಯನ್ನು ಮಾಡಿಕೊಳ್ಳುತ್ತಿದ್ದು ಆಸಕ್ತ ಚಾಲಕರು ಇದರ ಸದುಪಯೋಗ ಥ್ಯ ಸಿಂಗ್ ಪಡೆಯಬಹುದು’, ಪ್ರೋವೀಜ್ ಮ್ಯಾನ್ ಸಿಸ್ಟಮ್ಸ್ ಪ್ರೈ. ಲಿಮಿಟೆಡ್ ಕ್ಲಸ್ಟರ್ ಮುಖ್ಯಸ್ಥರಾದ ಯತೀಂದ್ರ ಆರ್ ಹೇಳಿದರು.
ಪೀಣ್ಯ 2ನೇ ಹಂತದ ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಕಛೇರಿಯಲ್ಲಿ ಪ್ರೋವಿಜ್ ಮ್ಯಾನ್ ಸಿಸ್ಟಮ್ಸ್ ಸಂಸ್ಥೆ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.ನಂತರ ಮಾತನಾಡಿದ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಸುನೀಲ್ ಬಿ.ಕೆ, ‘ನಾವು ಹಂತಹಂತವಾಗಿ ಇವಿ ಬಸ್ ಗಳನ್ನು ಹೆಚ್ಚಿಸುತ್ತಿದ್ದು ಈಗ ದೀಪಾಂಜಲಿನಗರ(ಡಿಪೋ ನಂ 16, ಪೀಣ್ಯ(ಡಿಪೋ ನಂ.22), ಕನ್ನಲ್ಲಿ( ಡಿಪೋ ನಂ.35, ಹೆಣ್ಣೂರು(ಡಿಪೋ ನಂ.10) ಡಿಪೋಗಳಿಗೆ 1000 ಕ್ಕೂ ಹೆಚ್ಚು ಚಾಲಕರ ಅವಶ್ಯಕತೆ ಇದ್ದು ಚಾಲಕರು ನೇರ ನೇಮಕಾತಿಯಲ್ಲಿ ಭಾಗವಹಿಸಬಹುದು. ಈ ಪ್ರಕ್ರಿಯೆ ನಿರಂತರವಾಗಿರುತ್ತದೆ’, ಎಂದು ತಿಳಿಸಿದರು.
ದೆಹಲಿ ಕ್ಲಸ್ಟರ್ ಮುಖ್ಯಸ್ಥರಾದ ಅವನೀಶ್ ಉಪಾಧ್ಯಾಯ ಮಾತನಾಡಿ, ‘ಕನ್ನಡಿಗರಿಗೆ ಉದ್ಯೋಗ ನೀಡುವ ಉದ್ದೇಶದಿಂದ ನಡೆಯುತ್ತಿರುವ ಈ ನೇಮಕಾತಿಯಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಿ ಹಾಗೂ ಸಂಸ್ಥೆಯಿಂದ ನೇಮಕವಾದ ಚಾಲಕರಿಗೆ ಎಲ್ಲಾ ಸೌಲಭ್ಯಗಳು ಸಿಗಲಿವೆ’, ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರೋವಿಜ್ ಮ್ಯಾನ್ ಸಿಸ್ಟಮ್ ನ ಅಪಘಾತ ವಿಭಾಗದ ಮುಖ್ಯಸ್ಥರುಗಳಾದ ವಿಜಯ್ ಕುಮಾರ್, ರಕ್ಷಿತ್, ದಿಲೀಪ್ ಕುಮಾರ್, ಡ್ಯೂಟಿ ಆಫೀಸರ್ ಗಳಾದ ಜಯರಾಮ್ ಹೆಚ್.ಕೆ, ಜಗದೀಶ್ ಎಂ.ವಿ ಸೇರಿದಂತೆ ಪ್ರೋವಿಜ್ ಮ್ಯಾನ್ ಸಿಸ್ಟಮ್ ಆಡಳಿತ ವರ್ಗ, ಸಿಬ್ಬಂದಿ ವರ್ಗದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬೇಕಾಗಿರುವ ದಾಖಲೆಗಳು: ಆಧಾರ್:- ಕಾರ್ಡ್, ಪಾನ್ ಕಾರ್ಡ್, 4 ಪಾಸ್ ಪೋರ್ಟ್ ಸೈಜ್ ಫೋಟೋ, ಹೆಚ್.ಪಿ.ವಿ ಬ್ಯಾಡ್ಜ್ ವುಳ್ಳ ಡಿ.ಎಲ್ ನೊಂದಿಗೆ 2 ವರ್ಷ ಅನುಭವದೊಂದಿಗೆ 22 ರಿಂದ 55 ವರ್ಷ ವಯಸ್ಸಿನವರು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಮೊ: 9844515875, 9972653406, 9611330176, 7259174598, 9739674270.
ವರದಿ:- ಅಯ್ಯಣ ಮಾಸ್ಟರ್