ಚಿತ್ರದುರ್ಗ: ಜಿಲ್ಲೆಯಲ್ಲಿ ಕೆಂಪು ಸುಂದರಿ ಟೊಮೆಟೊ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ, ಕಳೆದ ಐದಾರು ತಿಂಗಳಿಂದ ಟೊಮೋಟೊಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
ಉತ್ತಮ ಬೆಳೆ ನಿರೀಕ್ಷೆಯಲ್ಲಿ ನರ್ಸರಿಗಳಲ್ಲಿ ಸಸಿ ತಂದು ನಾಟಿ ಮಾಡಿ,ಬೀಜ ಗೊಬ್ಬರ ಸೇರಿದಂತೆ ಕೂಲಿ ವೆಚ್ಚ ಸೇರಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದಾರೆ ಆದರೆ ಮಾರುಕಟ್ಟೆಯಲ್ಲಿ ಬಾರಿ ಪ್ರಮಾಣದಲ್ಲಿ ಟೊಮೇಟೊ ದರ ಕುಸಿದ ಕಾರಣ ಹಾಕಿದ ಬಂಡವಾಳವು ಕೈಗೆ ಸಿಗದೇ ಸಾಲದ ಸುಳಿಗೆ ಸಿಲುಕಿದ್ದಾರೆ.
ಟೊಮೆಟೊ ಬೆಳೆಯುವುದು ರೈತರಿಗೆ ಸವಾಲಿನ ಕೆಲಸ,ಯಾವಾಗ ಲಾಭ,ಯಾವಾಗ ನಷ್ಟ ಎಂಬುದೇ ತಿಳಿಯುವುದಿಲ್ಲ.ಇದೀಗ ಜಿಲ್ಲೆಯಿಂದ ಕಟಾವು ಮಾಡಲಾಗುತ್ತಿರುವ ಟೊಮ್ಯಾಟೋಗೆ ಪ್ರತಿ ಬಾಕ್ಸ್ ಗೆ ಇಂದಿನ ಮಾರುಕಟ್ಟೆಯಲ್ಲಿ 100 ರಿಂದ 150 ರೂಪಾಯಿ ಖರೀದಿಯಾಗುತ್ತದೆ ಇದರಲ್ಲಿ ಸಾಗಾಣಿಕೆ ವೆಚ್ಚ,ಕೂಲಿ ಕಾರ್ಮಿಕರ ವೆಚ್ಚಕ್ಕೆ ಇದು ಸರಿ ಹೋಗುತ್ತದೆ.
ಪ್ರತಿ ವರ್ಷ ಜಿಲ್ಲೆಯಲ್ಲಿ 7,500ರಿಂದ 8,000 ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಈವರೆಗೆ ಅಂದಾಜು 6,000 ಹೆಕ್ಟೇರ್‌ನಲ್ಲಷ್ಟೇ ನಾಟಿಯಾಗಿದೆ. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೆಚ್ಚು ಗುರಿ ಸಾಧನೆಯಾಗಿದೆ. ಮೇ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದಿದ್ದರಿಂದ ಉಳಿದ ರೈತರು ನಾಟಿಗೆ ಸಿದ್ಧತೆ ಮಾಡಿಕೊಂಡಿಲ್ಲ. ನಾಟಿ ಪ್ರದೇಶ ಕುಸಿತಕ್ಕೆ ಇದು ಪ್ರಮುಖ ಕಾರಣ ಎನ್ನಲಾಗಿದೆ.ಕಳೆದ ವರ್ಷ ಡಿಸೆಂಬರ್‌ನಲ್ಲಿ ಕುಸಿತವಾದ ಟೊಮೆಟೊ ದರ ಮತ್ತೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಅಲ್ಲದೆ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಂದ ಹೆಚ್ಚಾಗಿ ಟೊಮೆಟೊ ಕರ್ನಾಟಕಕ್ಕೆ ರಪ್ತು ಆಗುತ್ತಿದೆ,ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದ ಕಾರಣ ಕೋಲಾರಕ್ಕೆ ಮಾರುಕಟ್ಟೆಗೆ ಟೊಮೋಟೊ ಸಾಗಿಸಬೇಕು ಈಗಾಗಿ ದರದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಬೆಳೆ ಕಮ್ಮಿಯಾಗಿದೆ, ಇದಕ್ಕೆ ಮುಖ್ಯ ಕಾರಣ ಮುಂಗಾರು ಪೂರ್ವ ಮಳೆಯಿಂದ ಬೆಳೆ ಹಾನಿಯಾಗಿದೆ.ಕಾರ್ಮಿಕರ ಸಮಸ್ಯೆ, ಹೆಚ್ಚಿದ ಕೂಲಿ, ಔಷಧಿ ಬೆಲೆ, ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದಿರುವುದು ಹೀಗೆ ಹಲವು ಅಂಶಗಳು ಬೆಳೆಯಿಂದ ರೈತರು ವಿಮುಖರಾಗಲು ಕಾರಣವಾಗಿದೆ.
ನಿರ್ವಹಣೆ ವೆಚ್ಚ ದುಪ್ಪಟ್ಟಾಗಿದ್ದು ಪ್ರತಿ ಎಕರೆಯಲ್ಲಿ ತಾಂತ್ರಿಕ ಪದ್ಧತಿಯಡಿ ಟೊಮೆಟೊ ಬೆಳೆಯಲು ₹2 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ. ₹350 ದರದಲ್ಲಿ ಒಂದು ಬಾಕ್ಸ್ ಮಾರಾಟವಾದರೆ ಮಾತ್ರ ಲಾಭ ಕಾಣಬಹುದು.ಆದ್ರೆ ಈಗಿನ ದರ 100ರಿಂದ 150ರೂಪಾಯಿಗೆ ಕುಸಿತವಾಗಿದೆ. ಸರ್ಕಾರವು ತೊಮಟೆಗೆ ಬೆಂಬಲ ಬೆಲೆ ಘೋಷಿಸಬೇಕು– ಎಸ್ ಮಹಾಂತೇಶ್ ಟೊಮೋಟೊ ಬೆಳೆಗಾರ
ವರದಿ : ಪಿಎಂ ಗಂಗಾಧರ




