Ad imageAd image

ಪ್ರಾದೇಶಿಕ ಮೀಸಲಾತಿ ಸಂವಿಧಾನ ಬಾಹಿರ : ಸುಪ್ರೀಂ ಕೋರ್ಟ್ 

Bharath Vaibhav
ಪ್ರಾದೇಶಿಕ ಮೀಸಲಾತಿ ಸಂವಿಧಾನ ಬಾಹಿರ : ಸುಪ್ರೀಂ ಕೋರ್ಟ್ 
supreme court of india
WhatsApp Group Join Now
Telegram Group Join Now

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಜ್ಯಗಳು ನಿಗದಿಪಡಿಸುವ ಪ್ರಾಂತೀಯ ಮೀಸಲು ಸಂವಿಧಾನ ಬಾಹಿರವಾಗಿದೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದೆ.

ವೈದ್ಯಕೀಯ ಪಿಜಿ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ರಾಜ್ಯ ಕೋಟಾದಡಿ ನೀಡುತ್ತಿರುವ ಸ್ಥಳೀಯ ಮೀಸಲಾತಿ ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ಇದು ಅಸಾಂವಿಧಾನಿಕ.ಇದು ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪಿಜಿ ಮೆಡಿಕಲ್ ಕೋರ್ಸ್ ಗಳ ಪ್ರವೇಶ ಮೆರಿಟ್ ಮೇಲೆ ನಡೆಯಬೇಕು ಎಂದು ಕೋರ್ಟ್ ಹೇಳಿದೆ. ಈಗಾಗಲೇ ರಾಜ್ಯಗಳ ಕೋಟಾದಡಿ ನಿವಾಸ ಆಧಾರಿತ ಮೀಸಲಾತಿ ನೀಡಿದ್ದರೆ ಅದಕ್ಕೆ ಈ ತೀರ್ಪು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಭಾರತೀಯ ಪ್ರಜೆಗಳಾಗಿ ನಾವು ಯಾವುದೇ ರಾಜ್ಯದಲ್ಲಿ ವಾಸ ಮಾಡುವ ಹಕ್ಕನ್ನು ಹೊಂದಿದ್ದೇವೆ. ಭಾರತದ ಅತ್ಯಂತ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ದುಲಿಯಾ, ಎಸ್.ವಿ.ಎನ್. ಭಟ್ಟಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ನಾವೆಲ್ಲರೂ ಭಾರತದ ಗಡಿಯೊಳಗೆ ವಾಸಿಸುತ್ತಿದ್ದು, ಇಲ್ಲಿ ಪ್ರತ್ಯೇಕ ರಾಜ್ಯ ಅಥವಾ ಪ್ರಾದೇಶಿಕ ಹಕ್ಕು ಎಂಬುದೇನಿಲ್ಲ. ಭಾರತದ ಗಡಿಯೊಳಗೆ ಇರುವವರೆಲ್ಲರೂ ಭಾರತೀಯರೇ. ಅವರು ದೇಶದ ಯಾವುದೇ ಮೂಲೆಯಲ್ಲಿ ತಾವು ಬಯಸಿದ ವೃತ್ತಿ ಅಥವಾ ಮತ್ತು ವ್ಯಾಪಾರವನ್ನು ಮಾಡಬಹುದಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಾದರೂ ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಿದೆ.

ಚಂಡೀಗಢದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪಿಜಿ ವೈದ್ಯಕೀಯ ಕೋರ್ಸ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿವಾಸ ಆಧಾರದ ಮೀಸಲಾತಿ ಪರವಾಗಿ 2019ರಲ್ಲಿ ತೀರ್ಪು ನೀಡಿದ್ದು, ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ಸದಸ್ಯ ಪೀಠದಿಂದ ಈ ತೀರ್ಪು ನೀಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!