Ad imageAd image

ಇಂದಿನಿಂದ ಗ್ರಾಮ ಪಂಚಾಯಿತಿಗಳಲ್ಲಿಯೇ ಜನನ, ಮರಣದ ನೋಂದಣಿ ಆರಂಭ 

Bharath Vaibhav
ಇಂದಿನಿಂದ ಗ್ರಾಮ ಪಂಚಾಯಿತಿಗಳಲ್ಲಿಯೇ ಜನನ, ಮರಣದ ನೋಂದಣಿ ಆರಂಭ 
WhatsApp Group Join Now
Telegram Group Join Now

ಬೆಂಗಳೂರು: ಇಂದಿನಿಂದ ಗ್ರಾಮ ಪಂಚಾಯಿತಿಗಳಲ್ಲಿಯೇ ಜನನ, ಮರಣದ ನೋಂದಣಿ ಮಾಡಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನನ, ಮರಣ ನಂದಣಿ ವ್ಯವಸ್ಥೆಗೆ ಒತ್ತು ನೀಡಲು, 30 ದಿನದೊಳಗೆ ನೋಂದಾಯಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ಸರ್ಕಾರ ನೇಮಕ ಮಾಡಿದೆ.

ಜುಲೈ 1ರಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಜನನ, ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

21 ದಿನದೊಳಗೆ ನೋಂದಾಯಿಸಿದರೆ ಪ್ರಮಾಣ ಪತ್ರವನ್ನು ಉಚಿತವಾಗಿ ವಿತರಿಸಲಾಗುವುದು. 21 ದಿನಗಳ ನಂತರ 30 ದಿನಗಳೊಳಗೆ ನೋಂದಾಯಿಸಿದರೆ ಎರಡು ರೂಪಾಯಿ ಶುಲ್ಕ ವಿಧಿಸಲಾಗುವುದು.

30 ದಿನಗಳ ಬಳಿಕ 1 ವರ್ಷದೊಳಗೆ ತಹಶೀಲ್ದಾರರ ಪತ್ರ ಲಗತ್ತಿನ ಜೊತೆಗೆ 5ರೂಪಾಯಿ ಶುಲ್ಕ ಪಾವತಿಸಬೇಕು. ಒಂದು ವರ್ಷದ ನಂತರವಾದಲ್ಲಿ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ ಆದೇಶ ಪತ್ರ ಲಗತ್ತಿಸಿ 10 ರೂಪಾಯಿ ಶುಲ್ಕ ಪಾವತಿಸಬೇಕಿದೆ.

ಇ-ಮೇಲ್ [email protected], [email protected], ಸಹಾಯವಾಣಿ ಸಂಖ್ಯೆ 1800 425 6578 ಸಂಪರ್ಕಿಸಬಹುದು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!