Ad imageAd image

ಕಿರು ಆಹಾರ ಸಂಸ್ಕರಣ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ

Bharath Vaibhav
ಕಿರು ಆಹಾರ ಸಂಸ್ಕರಣ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ
WhatsApp Group Join Now
Telegram Group Join Now

ರಾಯಚೂರು:- ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಅಡಿ ಪಿ ಎಂ ಎಫ್ ಎಂ ಇ ಯೋಜನೆಯ ಅರ್ಹ ಫಲಾನುಭವಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಜಂಟಿ ಕೃಷಿ ಉಪನಿರ್ದೇಶಕ ನಾಹೀಮ್ ಹುಸೇನ್ ಕಾರ್ಯಕ್ರಮದಲ್ಲಿ ಭಾಗಿ,


ನಗರದ ಕೃಷಿ ವಿಜ್ಞಾನಗಳ ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಪಿ ಎಂ ಎಫ್ ಎಂ ಈ ಯೋಜನೆ ಅಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇಂದು ಮೂರು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಜಂಟಿ ಕೃಷಿ ಉಪನಿರ್ದೇಶಕ ನಾಹೀಮ್ ಹುಸೇನ್ ಸಾಹೇಬರು ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಫಲಾನುಭವಿಗಳಿಗೆ ಸವಿಸ್ತಾರವಾಗಿ ವಿವರಿಸಿ ತಿಳಿಸಿದರು. ತಾವೆಲ್ಲರು ಮೂರು ದಿನಗಳ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ಉದ್ಯಮಿಗಳು ತಾವು ಉದ್ಯಮವನ್ನು ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಫಲಾನುಭವಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಂಟಿ ಉಪ ಕೃಷಿ ನಿರ್ದೇಶಕರು ನಾಹೀಮ್ ಹುಸೇನ್ ಸಹಯಕ ಕೃಷಿ ನಿರ್ದೇಶಕರು. ಮಲ್ಲಿಕಾರ್ಜುನ ಅಧಿಕಾರಿಗಳು.ಡಿ ಆರ್ ಪಿ ರಮೇಶ್ ರೆಡ್ಡಿ.ಡಿ ಆರ್ ಪಿ ಆಸಾದೂಲ್ಲ.ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿ:- ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!