Ad imageAd image

ಗೂಂಡಾ ಕಾಯ್ದೆಯಡಿ ರೆಹಮತ್,ಬಾರವಾಲೆ ಅರೆಸ್ಟ್

Bharath Vaibhav
ಗೂಂಡಾ ಕಾಯ್ದೆಯಡಿ ರೆಹಮತ್,ಬಾರವಾಲೆ ಅರೆಸ್ಟ್
WhatsApp Group Join Now
Telegram Group Join Now

————————————ರೌಡಿ ಪರೇಡ್‌ನಲ್ಲಿ ಖಡಕ್ ಎಚ್ಚರಿಕೆ ನೀಡಿದ ಕಮೀಶನರ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಜನರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ವಿವಿಧ ಕಾರಾಗೃಹಗಳಿಗೆ ಕಳುಹಿಸಲಾಗಿದ್ದು, ಇಂದು ಮತ್ತೆ ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ. ಹಳೇಹುಬ್ಬಳ್ಳಿ ಹೆಗ್ಗೇರಿಯ ರೆಹಮತ್ ಧಾರವಾಡ(೩೩) ಹಾಗೂ ಸದರಸೋಫಾದ ಮೊಹಮ್ಮದ್ ರಫೀಕ್ ಬಾರವಾಲೆ(೨೮) ಎಂಬಿಬ್ಬರೇ ಬಂಧಿಸಲ್ಪಟ್ಟವರಾಗಿದ್ದಾರೆ ಎಂದು ಆಯುಕ್ತ ಶಶಿಕುಮಾರ ತಿಳಿಸಿದರು.


ಮಹಾನಗರದಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ರೌಡಿ ಪರೇಡ್‌ನ್ನು ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಿಆರ್ ಮೈದಾನದಲ್ಲಿ ನಡೆಸಿ ಮಾತನಾಡಿದ ಅವರು,
ರೆಹಮತ್ ಧಾರವಾಡ ಎಂಬಾತನÀ ವಿರುದ್ಧ ಕೊಲೆ, ಕೊಲೆ ಯತ್ನ, ಎನ್‌ಡಿಪಿಎಸ್, ಎಆರ್‌ಎಂಎಸ್ ಆ್ಯಕ್ಟ್ ಸೇರಿದಂತೆ ಒಟ್ಟು ೨೭ ಪ್ರಕರಣಗಳು ದಾಖಲಾಗಿದ್ದು, ಹಳೇಹುಬ್ಬಳ್ಳಿ, ಕಸಬಾಪೇಟೆ, ಘಂಟಿಕೇರಿ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಮತ್ತು ಎಂಓಬಿ ಕಾರ್ಡ್ ತೆರೆಯಲಾಗಿದ್ದು, ೨೦೨೪ರಲ್ಲಿ ಮಂಡ್ಯ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಇದೀಗ ಮತ್ತೆ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಮೊಹಮ್ಮದ್ ರಫೀಕ್ ಬಾರವಾಲೆ ವಿರುದ್ಧ ಕೊಲೆ, ಎನ್‌ಡಿಪಿಎಸ್, ಎಆರ್‌ಎಂಎಸ್ ಆ್ಯಕ್ಟ್ ಸೇರಿದಂತೆ ಒಟ್ಟು ೧೩ ಪ್ರಕರಣಗಳು ದಾಖಲಾಗಿದ್ದು, ಕಸಬಾಪೇಟೆ, ಕಮರಿಪೇಟೆ, ಘಂಟಿಕೇರಿ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟರ್ ಮತ್ತು ಎಂಓಬಿ ಕಾರ್ಡ್ ತೆರೆಯ ಲಾಗಿದ್ದು, ೨೦೨೫ ರಲ್ಲಿ ಕಲಬುರ್ಗಿ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಇದೀಗ ಮತ್ತೆ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಿ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದರು.


ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು, ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ೨೩೦ಕ್ಕೂ ಹೆಚ್ಚು ಕೊಲೆ ಪ್ರಕರಣಗಳಾಗಿವೆ. ಹಳೆಯ ವೈಷ್ಯಮ್ಯ, ಹಣಕಾಸಿನ ವಿಷಯ, ಕೌಟುಂಬಿಕ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದಿದೆ. ಈ ಕೃತ್ಯದಲ್ಲಿ ಹೊಸದಾಗಿ ಅಪರಾಧ ಮಾಡಿದವರೇ ಹೆಚ್ಚಾಗಿದ್ದಾರೆ. ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ನಡೆದ ಕೃತ್ಯಗಳಿಗೆ ಸಂಬAಧಿಸಿದAತೆ ೯೦೦ ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಅದರಲ್ಲಿ ಕೆಲಸವನ್ನು ಬಂಧಿಸಲಾಗಿದೆ. ಮತ್ತೆ ಕೆಲವರನ್ನು ಬಂಧಿಸಬೇಕಿದೆ ಎಂದರು.
೨೦೨೪-೨೫ ನೇ ಸಾಲಿನಲ್ಲಿ ನಡೆದ ಅಪರಾಧ ಕೃತ್ಯಗಳಿಗೆ ಸಂಬAಧಿಸಿದAತೆ ಪರಿಶೀಲನೆ ಮಾಡಲಾಗುವುದು. ಇದರಲ್ಲಿ ಕೃತ್ಯ ಎಸಗಿದವರ ಮಾಹಿತಿ ಕಲೆ ಕಾಕಿ ಸಾರ್ವಜನಿಕರಲ್ಲಿ ಭಯ ಉಂಟು ಮಾಡುವ ಆರೋಪಿಗಳ ಮೇಲೆ ರೌಢಿಶೀಟರ್ ಓಪನ್ ಮಾಡಿ, ಅಂತವರ ವಿರುದ್ಧ ಕೋಟಾ ಕಾಯ್ದೆ, ಆರ್ಮ್ಸ್ ಆ್ಯಕ್ಟ್, ಗಡಿಪಾರು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ೧೭೦೦ ರೌಡಿಶೀಟರ್ ಗಳಲ್ಲಿ ೫೦೦ ಜನರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ. ಹೊಸದಾಗಿ ೧೦೮ ಜನರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಮಂಟೂರ ರಸ್ತೆಯ ಮಲ್ಲಿಕ್ ಜಾನ್ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ೧೧ ಜನರನ್ನು ಬಂಧಿಸಲಾಗಿದೆ. ಇಬ್ಬರು ಪ್ರಮುಖ ಆರೋಪಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಶೀಘ್ರವೆ ಅವರ ಹೆಸರು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
ಬಳಿಕ ವಿವಿಧ ಠಾಣೆಗಳಲ್ಲಿ ಕೊಲೆಯತ್ನ ನಡೆಸಿದ ಆರೋಪಿಗಳಿಗೆ ಕಮಿಷನರ್ ಶಶಿಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಈ ವೇಳೆ ಡಿಸಿಪಿ ರವೀಶ್ ಸಿ.ಆರ್, ಮಹನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯ್ಕ ಸೇರಿದಂತೆ ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಉಪಸ್ಥಿತರಿದ್ದರು.

ವರದಿ: ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!