ಐಗಳಿ: ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಜನಾಂಗಕ್ಕೆ ಒಳಮೀಸಲಾತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಐಗಳಿ ಗ್ರಾಮದ ಮಾದಿಗ ಸಮುದಾಯದಿಂದ ಗ್ರಾಮಸ್ಥರಿಗೆ ಸಹಿ ಹಂಚಿ ಪಾಟಾಕಿ ಸಡಿಸಿ ಸಂಭ್ರಮಾಚಾರಣೆ ಮಾಡಿದರು.
ಕಳೆದ ೩೦ ವರ್ಷಗಳಿಂದ ಮಾದಿಗ ಸಮುದಾಯ ಒಳಮೀಸಲಾತಿ ಸಲವಾಗಿ ಹೋರಾಟ ಮಾಡುತ್ತಾ ಬಂದಿದೆ ಈಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತಿಹಾಸಿಕ ನಿರ್ಧಾರ ಮಾಡಿದ್ದಾರೆ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯ 36ಲಕ್ಷ ಕ್ಕಿಂತ ಅಧಿಕವಾಗಿದ್ದು ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜಾತಿ ಜನಸಂಖ್ಯೆಯಲ್ಲಿ ಮೂದಲ ಸ್ಥಾನದಲ್ಲಿ ಇದೆ ಎಂದು ನ್ಯಾಯಮೂರ್ತಿ ನಾಗಮಹೊನ್ ದಾಸ ಅವರ ಆಯೋಗ ಸರ್ಕಾರಕ್ಕೆ ವರದಿ ನೀಡದ್ದು ಈಗಿರುವ ಒಟ್ಟು ೧೭ ಮೀಸಲಾತಿಯಲ್ಲಿ ಮೂರು ವರ್ಗಗಳಾಗಿ ವಿಂಗಡನೆಯ ಮಾಡಿದ್ದಾರೆ.
ಇದರಲ್ಲಿ ಪ್ರ ವರ್ಗ ಎ, ಪ್ರ ವರ್ಗ ಬಿ, ಪ್ರವರ್ಗ ಸಿ ಇದರಲ್ಲಿ ಮಾದಿಗ ಸಮುದಾಯಕ್ಕೆ ಪ್ರವರ್ಗ ಎ 6% ನೀಡಿದ್ದಾರೆ ಅದರಂತೆ ಹೊಲೆಯ ಉಪಜಾತಿಗೆ 6% ಹಾಗೂ ಲಂಬಾಣಿ ಬೋವಿ ಕೊರಚ ಸೇರಿದಂತೆ ಅಲೆಮಾರಿ ಜಾತಿಗೆ ೫% ಮೀಸಲಾತಿ ನೀಡಿದೆ ಆದರಿಂದ ಮೂರು ದಶಕದ ಮಾದಿಗ ಸಮುದಾಯದ ಹೋರಾಟಕ್ಕೆ ಜಯ ಸಿಕ್ಕಿದೆ ಆದಕಾರಣ ಮಾದಿಗ ಸಮುದಾಯದ ವತಿಯಿಂದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗು ಸಚಿವ ಸಂಪುಟದ ಎಲ್ಲ ಸಚಿವರಿಗೆ ಪ್ರಮುಖವಾಗಿ ಒಳಮೀಸಲಾತಿ ಹೋರಾಟಗರಿಗೆ ಅಭಿನಂದನೆಗಳು ಎಂದು ಆಕಾಶ ಮಾದರ ಹೇಳಿದರು .
ಈ ಸಂದರ್ಭದಲ್ಲಿ ಐಗಳಿ ಗ್ರಾಮದ ಹಿರಿಯರಾದ ಸಿ ಎಸ್ ನೇಮಗೌಡ ಮಾಜಿ ತಾ ಪಂ ಸದಸ್ಯರಾದ ಗುರುಪ್ಪ ಬಿರಾದರ ಪಿಕೆಪಿಎಸ್ ಅಧ್ಯಕ್ಷರಾದ ಬಸವರಾಜ ಬಿರಾದಾರ. ಕೃಷ್ಣಾ ಸುಗರ್ಸ ನಿರ್ದೇಶಕರಾದ ಪ್ರಲ್ಹಾದ ಪಾಟೀಲ ಜಟ್ಟೇಪ್ಪ ಗೌಡನವರ. ಮಾದಿಗ ಸಮುದಾಯದ ಹಿರಿಯರಾದ ರಾಚ್ಚಪ್ಪ ಮಾದರ ಮಲ್ಲಪ್ಪ ಮಾದರ ಪಾಂಡು ಮಹಾಲಿಂಗಪೂರ ವಿಠ್ಠಲ ಮಾದರ ಸುರೇಶ ಮಾದರ ಯುವಕರಾದ ಅಪ್ಪಸಾಬ ಮಾದರ ಸಚೀನ ಮಾದರ ಸದಾಶಿವ ಮಾದರ ಮುಂತಾದವರು ಉಪಸ್ಥಿತಿ ಇದ್ದರು.




