Ad imageAd image

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ.

Bharath Vaibhav
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ.
WhatsApp Group Join Now
Telegram Group Join Now

ಭಾಲ್ಕಿ : ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ರಾಜ್ಯ ಘಟಕದ ವತಿಯಿಂದ ಮುದ್ರಣಗೊಂಡ 2026ನೇ ಸಾಲಿನ ಕ್ಯಾಲೆಂಡರ್‌ನ್ನು ಮಾನ್ಯ ಅರಣ್ಯ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಈಶ್ವರ ಖಂಡ್ರೆ ಅವರು,
“ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಿತಸಾಧನೆ, ಸೇವಾ ಭದ್ರತೆ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಬಲಪಡಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಸಂಘದ ಕ್ಯಾಲೆಂಡರ್‌ವು ಕೇವಲ ದಿನಾಂಕಗಳ ಸಂಕಲನ ಮಾತ್ರವಲ್ಲ, ಸರ್ಕಾರದ ಯೋಜನೆಗಳು, ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸುವ ಮಹತ್ವದ ದಾಖಲೆ ಆಗಿದೆ. ನೌಕರರು ಜನಸೇವೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಲಿದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾದ ಸೋಮಶೇಖರ ಬಿರಾದಾರ ಮಾತನಾಡಿ ಕಾರ್ಯಕ್ರಮವು ಸಂಘಟಿತ ಸರ್ಕಾರಿ ನೌಕರರ ಶಕ್ತಿ ಹಾಗೂ ಸೇವಾಭಾವವನ್ನು ಪ್ರತಿಬಿಂಬಿಸಿದ ಮಹತ್ವದ ವೇದಿಕೆಯಾಗಿದ್ದು, 2026ನೇ ಸಾಲಿನಲ್ಲಿ ನೌಕರರ ಹಿತಸಾಧನೆಗೆ ಹೊಸ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯದರ್ಶಿಗಳಾದ ಪ್ರಭುಲಿಂಗ ತೂಗಾಂವೆ, ರಾಜ್ಯ ಪರಿಷತ್ ಸದಸ್ಯರಾದ ರಾಜಕುಮಾರ ಮಾಳಗೆ, ಕಾರ್ಯಾಧ್ಯಕ್ಷರಾದ ಶಿವರಾಜ ಕಪ್ಲಾಪುರೆ,ಭಾಲ್ಕಿ ತಾಲೂಕ ಅಧ್ಯಕ್ಷರಾದ ಚಂದ್ರಶೇಖರ ಬನ್ನಾಳೆ, ತಾಲೂಕು ಕಾರ್ಯದರ್ಶಿಗಳಾದ ರಾಜಪ್ಪ ಪಾಟೀಲ, ಹಿರಿಯ ಉಪಾಧ್ಯಕ್ಷರಾದ ಶಿವಕುಮಾರ ಫುಲಾರೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ತಾಲೂಕ ಅಧ್ಯಕ್ಷರಾದ ಹನುಮಂತರಾವ ಚೌಹಾಣ, ತಹಸೀಲ್ದಾರರಾದ ಮಲ್ಲಿಕಾರ್ಜುನ ವಡ್ಡನಕೆರೆ, ಉಪ ನಿರ್ದೇಶಕರಾದ ಹೆಚ್.ಜಿ. ಸುರೇಶ್, ಡಯಟ್ ಪ್ರಾಂಶುಪಾಲರಾದ ಗುರುಪ್ರಸಾದ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಪ್ಪ ಜಿ. ಹಳ್ಳದ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೂರ್ಯಕಾಂತ ಬಿರಾದರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೂರ್ಯಕಾಂತ ಸುಂಟೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ದತ್ತು ಕಾಟ್ಕರ, ನಿರ್ದೇಶಕರಾದ ನಿರಂಜಪ್ಪ ಪಾತ್ರೆ ಸೇರಿದಂತೆ ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿ ಸಮೂಹ ಭಾಗವಹಿಸಿದ್ದರು.

ವರದಿ : ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!