Ad imageAd image

” ಧರ್ಮವನ್ನು ಕಾಪಾಡಿದರೆ| ಧರ್ಮ ನಮ್ಮನ್ನು ರಕ್ಷಿಸುತ್ತದೆ- ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಮಹಾ ಸ್ವಾಮೀಜಿ “

Bharath Vaibhav
” ಧರ್ಮವನ್ನು ಕಾಪಾಡಿದರೆ| ಧರ್ಮ ನಮ್ಮನ್ನು ರಕ್ಷಿಸುತ್ತದೆ- ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಮಹಾ ಸ್ವಾಮೀಜಿ “
WhatsApp Group Join Now
Telegram Group Join Now

ಬೆಂಗಳೂರು : ಧರ್ಮದ ಆಚರಣೆಗಳು ಮಾನವನ ಜೀವನದಲ್ಲಿ ಅಳವಡಿಸಿ ಕೊಂಡು ಹೋಗ ಬೇಕು ‘ಧರ್ಮವನ್ನು ಕಾಪಾಡಿದರೆ’ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಪೇಜಾವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಮಹಾ ಸ್ವಾಮೀಜಿ ಹೇಳಿದರು.
‌‌. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಸ್ವಗೃಹದಲ್ಲಿ ಶಾಸಕ ಎಸ್ ಮುನಿರಾಜು ಅವರ ಧರ್ಮಪತ್ನಿ ಶ್ರೀಮತಿ ಸುಜಾತಾ ಮುನಿರಾಜು ಹಾಗೂ ಮಕ್ಕಳು ಅಳಿಯಂದಿರು ಮೊಮ್ಮಕ್ಕಳು ಶ್ರೀಗಳ ಪಾದಪೂಜೆ ನೆರವೇರಿಸಿದರು.


ಎಲ್ಲಿ ಧರ್ಮ ಇದೆಯೋ ಅಲ್ಲಿ ‘ಧರ್ಮೋ ಧರ್ಮ ರಕ್ಷತಿ’ ಜಯವಿದೆ. ಎಂದು ಶ್ರೀರಾಮ ಹೇಳುವ ಮೂಲಕ ನಮ್ಮ ಮಾತೃಭೂಮಿಯ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ’ ಅದನ್ನು ಪಾಲಿಸಿಕೊಂಡು ಹೋಗಬೇಕು ಶ್ರೀಗಳು
ಸ್ವಾಮಿಜಿಗಳು ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಾಸಕ ಎಸ್ ಮುನಿರಾಜು ಮಾತನಾಡಿ ‘ನನಗೆ ಮೊದಲ ಬಾರಿಗೆ ಶಾಸಕರಾಗಲು ಪೂಜೆ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಆಶೀರ್ವಾದವೇ ಮುಖ್ಯ . ದೇವರನ್ನು ನೇರವಾಗಿ ನೋಡದ ನಮಗೆ ಸನಾತನ ಧರ್ಮದ ಗುರು ಋಷಿ ಮುನಿಗಳು, ಸಾಧು ಸಂತರ ರೂಪದಲ್ಲಿ ದೇವರನ್ನು ಕಾಣಬಹುದು ಹಿಂದೂಗಳು ಒಂದಾಗಿ ಒಗ್ಗಟ್ಟಾದರೆ ದೇಶವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನಾಳಿದ ಬ್ರಿಟೀಷರ ದೇಶವನ್ನು ನಮ್ಮ ದೇಶದ ವ್ಯಕ್ತಿ ಆಳಿದರು. ಅದು ಈ ಮಣ್ಣಿಗೆ ಇರುವ ಶಕ್ತಿ. 48 ದಿನಗಳ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಮ್ಮ ಶ್ರೀಗಳ ಪಾದಪೂಜೆಗೆ ಅವಕಾಶ ದೊರೆತಿದ್ದು ನನ್ನ ಪೂರ್ವ ಜನ್ಮದ ಪುಣ್ಯ’, ಎಂದು ಶಾಸಕ ಎಸ್ ಮುನಿರಾಜು ಎಂದರು.
ಈ ಸಂದರ್ಭದಲ್ಲಿ ರವಿಜೀ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡಿನ ಬಿಜೆಪಿ ಅಧ್ಯಕ್ಷ ಬಿ ಸುರೇಶ್, ಕೃಷ್ಣಯ್ಯ ಹೆಗ್ಗನಹಳ್ಳಿ,ನಿಸರ್ಗ ಕೆಂಪರಾಜು, ಮುನಿರಾಜು ಲಾರಿ, ಎಸ್ ಆರ್ ಮಂಜುನಾಥ್, ಬಿ.ಎಂ ನಾರಾಯಣ್, ವಿನೋದ್ ಗೌಡ,ವೀರ ಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಆರಾಧ್ಯ, ಮುಖಂಡರು, ಮಹಿಳೆಯರು ಕಾರ್ಯಕರ್ತರು, ಮುಂತಾದವರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!