Ad imageAd image

ಖ್ಯಾತ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ಸಾವು 

Bharath Vaibhav
ಖ್ಯಾತ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ಸಾವು 
WhatsApp Group Join Now
Telegram Group Join Now

ಮುಂಬೈ: ಪುನೀತ್ ರಾಜ್ಕುಮಾರ್ ಅವರ ಹುಡುಗರು ಚಿತ್ರದ ‘ಬೋರ್ಡು ಇರದ ಬಸ್ಸನು’, ಕಾಂಟಾ ಲಗಾ ಹಾಡಿ ನಲ್ಲಿ ನೃತ್ಯ ಮಾಡಿದ್ದ ನಟಿ ಶೆಫಾಲಿ ಜರಿವಾಲಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜನಪ್ರಿಯ ಸಂಗೀತ ವೀಡಿಯೊ ‘ಕಾಂಟಾ ಲಗಾ’ ಮೂಲಕ ಪ್ರಸಿದ್ಧರಾದ ನಟಿ ಮತ್ತು ರೂಪದರ್ಶಿ ಶೆಫಾಲಿ ಜರಿವಾಲಾ ಶುಕ್ರವಾರ ಮುಂಬೈನಲ್ಲಿ ನಿಧನರಾದರು.ಅವರಿಗೆ 42 ವರ್ಷ ವಯಸ್ಸಾಗಿತ್ತು. ಅವರ ಸಾವಿಗೆ ಕಾರಣ ಹೃದಯಾಘಾತ ಎಂದು ತಿಳಿದುಬಂದಿದೆ.

ಶುಕ್ರವಾರ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಶೆಫಾಲಿ ಅವರು ಕುಸಿದು ಬಿದ್ದಿದ್ದು, ಕೂಡಲೇ ಅವರ ಪತಿ ನಟ ಪರಾಗ್ ತ್ಯಾಗಿ ಅವರು ಕೂಡಲೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರ ಅಷ್ಟರ ವೇಳೆಗೆ ನಟಿ ಮತಪಟ್ಟಿದ್ದರು ಎಂದು ವೈದ್ಯರು ತಿಳಿಸಿದಾರೆ.

ಶೆಫಾಲಿ ಜರಿವಾಲಾ 2000 ರ ದಶಕದ ಆರಂಭದಲ್ಲಿ ಕಾಂಟಾ ಲಗಾ ಎಂಬ ರೀಮಿಕ್ಸ್ ವೀಡಿಯೊದೊಂದಿಗೆ ಜನಪ್ರಿಯರಾದರು. ಇದರಿಂದಾಗಿ ಅವರಿಗೆ ‘ಕಾಂಟಾ ಲಗಾ ಗರ್ಲ್’ ಎಂಬ ಅಡ್ಡಹೆಸರು ಸಿಕ್ಕಿತು..

ನಂತರ ಅವರು ಸಲ್ಮಾನ್ ಖಾನ್ ಅವರ ಚಲನಚಿತ್ರ ಮುಜ್ಸೆ ಶಾದಿ ಕರೋಗಿಯಲ್ಲಿ ಕೆಲಸ ಮಾಡಿದರು, ಇದರ ಜೊತೆಗೆ ಅವರು ನಾಚ್ ಬಲಿಯೇ ಮತ್ತು ಬಿಗ್ ಬಾಸ್ 13 ನಂತಹ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!