Ad imageAd image

ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕು : ಖ್ಯಾತ ವೈದ್ಯಾಧಿಕಾರಿ ಆಕಾಶ್

Bharath Vaibhav
ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕು : ಖ್ಯಾತ ವೈದ್ಯಾಧಿಕಾರಿ ಆಕಾಶ್
WhatsApp Group Join Now
Telegram Group Join Now

ಹೊಸಪೇಟೆ: ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂದು ನಗರದ ಖ್ಯಾತ ವೈದ್ಯಾಧಿಕಾರಿ ಆಕಾಶ್ ಹೇಳಿದರು. ವಿಶ್ವ ವೈದ್ಯರ ದಿನಾಚರಣೆ ನಿಮಿತ್ತ ಸ್ಥಳೀಯ ಆಶ್ರಯ ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವರ ಆರೋಗ್ಯದ ಸಮಸ್ಯೆಗಳನ್ನು ಕೇಳಿ ರೋಗಕ್ಕೆ ಸೂಕ್ತ ಔಷಧಗಳನ್ನು ನೀಡಬೇಕು.ಎಂದರು.

ಇಂದು ವೈದ್ಯ ವೃತ್ತಿಗೆ ಕಾಲಿಡಲು ತಂದೆಯೇ ಪ್ರಮುಖ ಕಾರಣ ಎಂದ ಅವರು, ನಗರದಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸಿದವರು ತಂದೆ ಡಾ.ಕುಮಾರಸ್ವಾಮಿ. ತಂದೆಯ ಪ್ರೇರಣೆಯಿಂದ ಇಂದು ನಗರದಲ್ಲಿ ಶ್ರೇಷ್ಠ ವೈದ್ಯರಾಗಿ ರೋಗಿಗಳ ಸೇವೆಯನ್ನೂ ನೀಡುತ್ತಿದ್ದಾನೆ ಎಂದರು , ಮುಂದಿನ ದಿನಗಳಲ್ಲಿ ತಮ್ಮ ಆಸ್ಪತ್ರೆಯನ್ನು ಶ್ರೇಷ್ಠ ಆಸ್ಪತ್ರೆಯನ್ನಾಗಿ ಮಾಡುವುದಾಗಿ ಆಲೋಚನೆ ಇದೆ ಎಂದರು ಪ್ರತಿದಿನ ಕನಿಷ್ಠ ಒಂದು ಗಂಟೆ ಯೋಗ, ಧ್ಯಾನ, ನಡಿಗೆ, ವ್ಯಾಯಾಮ ಮಾಡುವುದರಿಂದ ಜನರು ಉತ್ತಮ ಆರೋಗ್ಯ ಪಡೆಯುತ್ತಾರೆ ಎಂದರು.

ವರದಿ : ಪಿ. ಶ್ರೀನಿವಾಸ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!