ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪುರಸಭೆ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ (ರಿ) ಬೆಂಗಳೂರು ಮತ್ತು ರಾಮದುರ್ಗ ಶಾಖೆ ಪೌರ ಸೇವಾ ನೌಕರರು ಸೇವಾ ಸಂಘ ವತಿಯಿಂದ ಎರಡನೇ ದಿನ ನಡೆಯುತ್ತಿರುವ ಮುಷ್ಕರ.
ರಾಜ್ಯಾದ್ಯಂತ ಕರ್ತವ್ಯಕ್ಕೆ ಪೌರ ನೌಕರರು ಗೈರು, ಕಛೇರಿ ಕೆಲಸ, ಕಸ ಸಂಗ್ರಹಣೆ, ವಿಲೇವಾರಿ, ಸ್ವಚ್ಛತೆ, ಒಳಚರಂಡಿ ನಿರ್ವಹಣೆ ಸ್ಥಗಿತಗೋಳಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ.
ಸಂಘದ ಬೇಡಿಕೆಗಳು
ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸೌಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯಕ್ಕೆ ಆದೇಶವಿಲ್ಲದ ವಿಸ್ತರಿಸುವ ಬಗ್ಗೆ .
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಾತಿಗೊಳಿಸುವಬೇಕು .
ದಿನಗೂಲಿ ಕ್ಷೇಮಾಭಿವೃಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು.
ನಗರ ಸಭೆಗಳಲ್ಲಿ 100% . ಪೌರ ಕಾರ್ಮಿಕರನ್ನು ವಿಶೇಷ ನೇಮಕಾತಿಯಿಡಿ ನೇಮಕಾತಿ ಮಾಡಬೇಕು.
2022ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿಕರು ಲೋಡರ್ಸ್ ಗಳಿಗೆ ಎಸ್ ಎಫ್ ಸಿ ವೇತನ ನಿಧಿಯಿಂದ ಪಾವತಿಸಬೇಕು.
ಇನ್ನು ಅನೇಕ ಬೇಡಿಕೆಗಳು ಇದ್ದಿದ್ದು ಅವುಗಳನ್ನು ಪೂರೈಸಬೇಕು
ಒಂದು ವೇಳೆ ಬೇಡಿಕೆಗಳನ್ನು ಪೂರೈಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನೀರು ಪೂರೈಕೆ ಸ್ಥಗಿತ, ಆಗಬೌದು ಹೋರಾಟ ಗೆಲ್ಲೋವರೆಗೂ ಹೋರಾಟ, ನಿಲ್ಲಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕ್ ಅಧ್ಯಕ್ಷರಾದ ರೇಣುಕಾ ಹಲಗಿ ಮಾತನಾಡಿದರು.
ಈ ಒಂದು ಪ್ರತಿಭಟನೆಗೆ ಪಾಲ್ಗೊಂಡ ಕುಮಾರ್ ಸಿಗ್ಲಿ, ಹನುಮಂತ ಕಾರಡಿ , ರವೀಂದ್ರ ಅಂಗಡಿ, ಸಿಧವೀರ ಕೋಟೆ, ಪ್ರಕಾಶ್ ಪಾಟೀಲ, ಸಂಜಯ್ ರಾಠೋಡ, ಹಾಗೂ ಎಲ್ಲ ಸಿಬ್ಬಂದಿ ವರ್ಗದವರ ಈ ಒಂದು ಪ್ರತಿಭಟನೆಗೆ ಪಾಲ್ಗೊಂಡಿದ್ದರು .
ವರದಿ : ಮಂಜುನಾಥ ಕಲಾದಗಿ




