Ad imageAd image

ಮುದಗಲ್ಲ ಪುರಸಭೆ ವತಿಯಿಂದ ರೇಣುಕಾಚಾರ್ಯ ಜಯಂತಿ ಆಚರಣೆ.

Bharath Vaibhav
ಮುದಗಲ್ಲ ಪುರಸಭೆ ವತಿಯಿಂದ ರೇಣುಕಾಚಾರ್ಯ ಜಯಂತಿ ಆಚರಣೆ.
WhatsApp Group Join Now
Telegram Group Join Now

ಮುದಗಲ್ಲ : ಬುಧವಾರ ಪುರಸಭೆ ವತಿಯಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಣೆ ಮಾಡಲಾಯಿತು. ರೇಣುಕಾಚಾರ್ಯ ಭಾವಚಿತ್ರದ ಕ್ಕೆ ಕಿಲ್ಲಾದ ರಾಮಲಿಂಗಶ್ವರ ದೇವಸ್ಥಾನ ಅಚ೯ಕರಾದ ಸದಾನಂದ ಪಂಚಾಕ್ಷರಯ್ಯ ಹಿರೇಮಠ, ಹಾಗೂ ರಾಮಲಿಂಗಶ್ವರ ಕಾಲೋನಿಯ ರೇಣುಕಾಸ್ವಾಮಿ ಅವರು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಅವರು ಕಲಿಯುಗದಲ್ಲಿ ಮಾನವನು ಆಸೆ,ಅಸೂಯೆಗಳನ್ನು ತೊಡೆದು ಹಾಕಿ ಸಮಾಜದ ಒಳಿತಿಗಾಗಿ ಬದುಕಬೇಕು. ಧರ್ಮವನ್ನು ರಕ್ಷಣೆ ಮಾಡುವವರು ನಾವು, ಆದರೆ ಧರ್ಮವೆ ನಮ್ಮನ್ನು ರಕ್ಷಣೆ ಮಾಡುವಂತ್ತ ಪರಿಸ್ಥಿತಿ ನಿರ್ಮಾಣವಾಗಿದೆ.ಜ್ಯೋತಿ ಸ್ವರೂಪಿಯಾದ ರೇಣುಕಾಚಾರ್ಯರು ಸಮಾಜ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶಗಳನ್ನು ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮಾನತೆಯಿಂದ ಬದುಕಬೇಕು ಎಂದರು.

ನಂತರ ಮಾತನಾಡಿದ ಕಿಲ್ಲಾದ ರಾಮಲಿಂಗಶ್ವರ ದೇವಸ್ಥಾನ ಅಚ೯ಕರಾದ ಸದಾನಂದ ಪಂಚಾಕ್ಷರಯ್ಯ ಹಿರೇಮಠ
ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದುರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ., ತಮ್ಮಣ್ಣ ಗುತ್ತಿಗೆದಾರ, ಮೈಬಬು ಸಾಬ ಬಾರಿಗಿಡ , ಮಹೇಶ ವಸ್ತ್ರದ್, ಸುರೇಂದ್ರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಶಶಿಧರ ಕಂಚಿಮಠ,ಸಂಗಮೇಶ, ಅಮರೇಶ ಮಡಿವಾಳರ್ ಮಲ್ಲಪ್ಪ ಮಾಟೂರು, ಸಾಗರ್ ಪಾಟೀಲ್ , ಹಾಗೂ ಪುರಸಭೆ ಸಿಬ್ಬಂದಿ ಚನ್ನಮ್ಮ , ನಿಸಾರ್ ಅಹಮದ್, ಜಿಲಾನಿ ಪಾಶ , ಪವನ್ ಕುಮಾರ್ , ಇತರರು ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!