ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಾದ ದರ್ಶನ್ , ಪವಿತ್ರಾ ಗೌಡಗೆ ಸಂಕಷ್ಟ ಎದುರಾಗಿದೆ.
ಸುಪ್ರೀಂ ಕೋರ್ಟ್ ವಿಚಾರಣೆ ನೋಡಿ, 7 ಆರೋಪಿಗಳಿಗೆ ಟೆನ್ಶನ್ ಹೆಚ್ಚಾಗಿದೆ. ನಾಳೆ ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಜಾಮೀನು ರದ್ದು ಅರ್ಜಿ ಸಂಬಂಧ ಆದೇಶ ಹೊರಬೀಳುವ ಸಾಧ್ಯತೆ ಇದೆ.
ನಾಳೆ ದರ್ಶನ್ ಜಾಮೀನು ರದ್ಧತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಲಿದೆ. ಯಾಕೆಂದರೆ ಈಗಾಗಲೇ ಸರ್ಕಾರದ ಪರ ವಕೀಲರು ಹಾಗೂ ಆರೋಪಿಗಳ ಪರ ವಕೀಲರು ತಮ್ಮ ವಾದವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದಾರೆ.
ಆದ್ದರಿಂದ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ ಏಳು ಜನರ ಜಾಮೀನು ರದ್ಧತಿ ಅರ್ಜಿ ಸಂಬಂಧ ಆದೇಶ ಹೊರಡಿಸುವ ಸಾಧ್ಯತೆ ಇದೆ.




