——————————————-ಬಿವಿ 5 ಕನ್ನಡ ನ್ಯೂಸ್ ವರದಿ ಫಲಶ್ರುತಿ
ಸಿರುಗುಪ್ಪ: ಕ್ಷಕಿರಣ ಯಂತ್ರದ ದುರಸ್ತಿ ಹಾಗೂ ಫಿಲಂ ಲಭ್ಯವಿಲ್ಲವೆಂದು ಹೇಳುತ್ತಿದ್ದಾರೆ.
ಎಕ್ಸ್ ರೇಗಾಗಿ ಅಲೆದಾಡುವಂತಾಗಿದೆಂದು ಸಾರ್ವಜನಿಕರು ನವೆಂಬರ್ 15 ರಂದು ದೂರಿದ್ದರು.
ಎಕ್ಸ್ ರೇ ಯಂತ್ರದ ದುರಸ್ತಿಯ ಬಗ್ಗೆ ನವೆಂಬರ್ 16ರಂದು ವರದಿಯಾದ ಬೆನ್ನಲೇ ವೈದ್ಯಾಧಿಕಾರಿಗಳು 3 ದಿನಗಳಲ್ಲಿ ಫಿಲಂ ತರಿಸುವ ಮೂಲಕ ಸ್ಪಂದಿಸಿದ್ದು, ನಮ್ಮ “ಬಿವಿ5, ಕನ್ನಡ ನ್ಯೂಸ್” ವರದಿ ಫಲಶ್ರುತಿಯಾಗಿದೆ.

ನಗರದಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಕ್ಷಕಿರಣ ಯಂತ್ರದ ದುರಸ್ತಿಯಾಗಿದ್ದು, ಕ್ಷಕಿರಣದ ಫಿಲಂ ದಾಸ್ತಾನು ನಿನ್ನೆ ಬಂದಿವೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಕ್ಷಕಿರಣದ ಸೇವೆ ಲಭ್ಯವಿರುವುದಾಗಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿವೇಕಾನಂದ ಅವರು ಬುಧವಾರದಂದು ತಿಳಿಸಿದರು.
ಅಲ್ಲದೇ ನವೆಂಬರ್ 15 ಶನಿವಾರದಂದು ಯಂತ್ರದಲ್ಲಿ ಸಣ್ಣಪುಟ್ಟ ದೋಷವಿರುವುದರಿಂದ ಸ್ಥಗಿತಗೊಳಿಸಲಾಗಿತ್ತು. ಅದಕ್ಕಿಂತ ಮುಂಚೆ ಎರಡು ದಿನಗಳವರೆಗೂ ದಾಸ್ತಾನು ಖಾಲಿಯಾಗಿತ್ತು.
ಆಗಾಗ ಫಿಲಂ ಕೊರೆಯಾಗುತ್ತಿರುವ ಕಾರಣ ಕೊಠಡಿಯ ಬಾಗಿಲಿಗೆ ಅಂಟಿಸಲಾಗಿದ್ದ ಜ್ಞಾಪನೆ ಪತ್ರವನ್ನು ಕೀಳದಿರುವುದರಿಂದ ಮಾಹಿತಿಯ ಸಮಸ್ಯೆಯಾಗಿದೆ. ಆದರೂ ಸಹ ಸಾರ್ವಜನಿಕರ ದೂರಿದ ಬೆನ್ನಲೇ ನಮ್ಮ ಅಧಿಕಾರಿ ಯಂತ್ರವನ್ನು ಸರಿಪಡಿಸಿ ಕ್ಷಕಿರಣ ಚಿತ್ರೀಕರಣ ಮಾಡಿ ವಾಟ್ಸಾಪ್ ಮೂಲಕ ವೈದ್ಯರ ಮೊಬೈಲ್‌ಗೆ ಕಳುಹಿಸಿದ್ದಾರೆಂದು ಸ್ಪಷ್ಟೀಕರಿಸಿದರು. ಈಗ 875 ಫಿಲಂ ದಾಸ್ತಾನು ಬಂದಿದೆ. ಇನ್ನು ಮುಂದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಫಿಲಂ ಲಭ್ಯತೆಯನ್ನು ಅರಿತು ತರಿಸಿಕೊಳ್ಳುವುದಾಗಿ, ಎಕ್ಸ್ ರೇ ಸೌಲಭ್ಯ ದೊರೆಕಿಸುವುದಾಗಿ ತಿಳಿಸಿದ್ದಾರೆ.
ಕಡು ಬಡವರೇ ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳು ದೊರೆಯಲಿ ಹಾಗೂ ಸಾರ್ವಜನಿಕರನ್ನು ವಿನಾ: ಕಾರಣ ಅಲೆಯಿಸದಂತೆ ಸೂಕ್ತ ಚಿಕಿತ್ಸೆ ಸಿಗಲಿ ಎಂಬುದು ನಮ್ಮ ಉದ್ದೇಶವಾಗಿದೆ.
ವರದಿ : ಶ್ರೀನಿವಾಸ ನಾಯ್ಕ




