Ad imageAd image

ಕುವೆಂಪು ನಗರಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಸ್ಥಳೀಯರಿಂದ ಮನವಿ

Bharath Vaibhav
ಕುವೆಂಪು ನಗರಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಸ್ಥಳೀಯರಿಂದ ಮನವಿ
WhatsApp Group Join Now
Telegram Group Join Now

ಸಿರುಗುಪ್ಪ : -ನಗರದ 16ನೇ ವಾರ್ಡಿನ ಕುವೆಂಪು ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ನಗರಸಭೆ ಆಯುಕ್ತ ಹೆಚ್.ಎನ್.ಗುರುಪ್ರಸಾದ್ ಅವರಿಗೆ ಸ್ಥಳೀಯರಿಂದ ಮನವಿ ಸಲ್ಲಿಸಲಾಯಿತು.

ಹಿರಿಯ ವಕೀಲರಾದ,ಸಿದ್ದಲಿಂಗಯ್ಯ ಸ್ವಾಮಿ ಅವರು ಮಾತನಾಡಿ ಮೂರು ದಶಕಗಳಿಂದಲೂ ನಿರ್ಮಿತವಾಗಿರುವ ಕುವೆಂಪು ನಗರವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.ನಗರದ ದಂಡೆಯಲ್ಲಿ ತುಂಗಾಭದ್ರ ನದಿ ಹರಿಯುತ್ತಿದ್ದರೂ ಸಮರ್ಪಕ ನೀರಿನ ಸರಬರಾಜಿಲ್ಲ.ಅರೆಬರೆ ಚರಂಡಿ ಕಾಮಗಾರಿಯಿಂದ ಚರಂಡಿ ನೀರು ಮನೆಗಳ ಮುಂದೆ ನಿಂತು ದೊಡ್ಡ ಹೊಂಡ, ಕೆರೆಗಳಂತೆ ಕಾಣುತ್ತಿದ್ದು, ಗಬ್ಬೆದು ನಾರುತ್ತಿದೆ.
ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಿದ್ದು ಸಾಂಕ್ರಾಮಿಕ ರೋಗರುಜಿನಗಳ ಭಯದಲ್ಲಿ ವಾಸಿಸುವಂತಾಗಿದೆ.

ಇನ್ನು ಮುಂದಾದರೂ ತಾವೇ ಸ್ಥಳಕ್ಕೆ ಖುದ್ದಾಗಿ ಬೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ನಿಜಾಂಶವನ್ನು ಅರಿತು ಸಂಬಂದಿಸಿದ ಜನಪ್ರತಿನಿಧಿಗಳು, ಮೇಲಾಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ಸ್ಥಳೀಯರಾದ ವಕೀಲರಾದ ತಿರುಮಲ ರಾಜಶೇಖರ, ಮೋಹನ್‌ಲಾಲ್, ಬಲರಾಮರೆಡ್ಡಿ, ಟಿ.ಪಿ.ಪ್ರಹ್ಲಾದ್ ಶೆಟ್ಟಿ, ಜೆ.ಪಿ.ನಾರಾಯಣಸ್ವಾಮಿ, ಜೆ.ಲಕ್ಷ್ಮಣರೆಡ್ಡಿ, ನವಲಿ ಮಲ್ಲಿಕಾರ್ಜುನ, ಎಮ್.ಶಾಂತಯ್ಯಸ್ವಾಮಿ, ಕೆಲ್ಲೂರು ಬಸವರಾಜ, ಎಸ್.ಲಿಂಗರಾಜ ಗುಪ್ತ, ಹೆಚ್.ವೀರೇಶಗೌಡ, ಕೆ.ವಿರುಪಾಕ್ಷಗೌಡ, ರಾಜಣ್ಣ, ಇನ್ನಿತರರಿದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!