Ad imageAd image

ಸವಣೂರನಲ್ಲಿ ಮೋತಿ ತಲಾಬ್ ಕೆರೆಗೆ ನೀರು ತುಂಬಿಸುವ ಸಲುವಾಗಿ ಹಲವು ಸಂಘಟನಾಕಾರರಿಂದ ಮನವಿ

Bharath Vaibhav
ಸವಣೂರನಲ್ಲಿ ಮೋತಿ ತಲಾಬ್ ಕೆರೆಗೆ ನೀರು ತುಂಬಿಸುವ ಸಲುವಾಗಿ ಹಲವು ಸಂಘಟನಾಕಾರರಿಂದ ಮನವಿ
WhatsApp Group Join Now
Telegram Group Join Now

ಹಾವೇರಿ :- ಸವಣೂರ ತಾಲೂಕಿನಲ್ಲಿ ಮೋತಿ ತಲಾಬಿಗೆ ನೀರು ತುಂಬಿಸುವ ಸಲುವಾಗಿ ಹಲವು ಸಂಘಟನೆಗಳಿಂದ ಮಾನ್ಯ ಉಪ ವಿಭಾಗ ಅಧಿಕಾರಿಗಳಾದ ಮೊಹಮ್ಮದ್ ಖಿಜರ ಯವರಿಗೆ ಮನವಿ ಸಲ್ಲಿಸಿದರು.

ಸವಣೂರಿನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ನಂತರ ಅಲ್ಲಿಂದ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಹಾಗೂ ಡಿಎಸ್ಎಸ್ ಸಂಘಟನೆ ಮತ್ತು ಪಿಎಸ್ಆರ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕೌನ್ಸಿಲ್ ಸಂಘಟನೆ ಮತ್ತು ಜಯ ಕರ್ನಾಟಕ ಸಂಘಟನೆ ಹಾಗೂ ಹಲವಾರು ಸಂಘಟನೆ ವತಿಯಿಂದ ಮೆರವಣಿಗೆ ಮುಖಾಂತರ ತಹಶೀಲ್ದಾರ್ ಕಚರಿಗೆ ತೆರಳಿ ಮಾನ್ಯ ಉಪ ವಿಭಾಗ ಅಧಿಕಾರಿಗಳಾದ ಮೊಹಮ್ಮದ್ ಖಿಜರ ಯವರಿಗೆ ಮನವಿಯನ್ನು ಸಲ್ಲಿಸಿದರು.

ಸವಣೂರ ತಾಲೂಕಿನ ದೊಡ್ಡ ಕೆರೆಗಳು ಹಾಗೂ ವಿವಿಧ ಸಣ್ಣ ಸಣ್ಣ ಕೆರೆಗಳಿಗೆ ಸವಣೂರ ಏತ ನೀರಾವರಿ ಘಟಕ ಕಳಸೂರ ಮುಖ್ಯ ಜಾಕವೇಲ್ ನಿಂದ ಹತ್ತಿಮತ್ತುರ ಭಾಗಕ್ಕೆ ಮತ್ತು ಸವಣೂರ ಭಾಗಕ್ಕೆ ನೀರು ಸರಬರಾಜ ಮಾಡುವ ಪ್ರಮುಖ ಯೋಜನೆಯಾಗಿದೆ ಎಂದರು.

ಧಾರವಾಡದ ಕರ್ನಾಟಕ ರಾಜ್ಯ ನೀರಾವರಿ ನಿಗಮದ ಅಧಿಕಾರಿಗಳು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸರಿಯಾಗಿ ಜಾರಿ ಮಾಡದೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಸ್ಥಳಿಕವಾಗಿ ಶಾಸಕರು ಮತ್ತು ಸಂಸದರ ಕಾಳಜಿ ಇರುವುದಿಲ್ಲ….

ಶಿಗ್ಗಾವ್ ಮತ್ತು ಸವಣೂರ ಈ ಕ್ಷೇತ್ರವು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಇವರದು ಆಗಿರುವುದರಿಂದ ಅವರು ಸಿಎಂ ಇದ್ದಾಗ ಕಾರ್ಯಗಳು ಶೂನ್ಯ ಆಗಿರುವುದರಿಂದ ಇವತ್ತು ಈ ಪರಿಸ್ಥಿತಿ ಬಂದಿರುತ್ತದೆ ಎಂದು ಎಂ ಎನ್ ನಾಯಕ್ ಹಾವೇರಿ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಯವರು ಆಕ್ರೋಶವನ್ನು ವ್ಯಕ್ತಪಡಿಸಿದರು…

ಮತ್ತು ಅವರು ಎಲೆಕ್ಷನ್ ಪ್ರಚಾರ ಮಾಡುವಾಗ ಈ ಸಲ ಆರಿಸಿ ಬಂದರೆ ಬರೀ ಮೂರು ತಿಂಗಳಗಳಲ್ಲಿ ನಿರಂತರ ನೀರ ಕೊಡುವುದಾಗಿ ಭರವಸೆಯನ್ನು ಕೊಟ್ಟಿದ್ದರು ಆರಿಸಿ ಬಂದ ನಂತರ ಆ ಭರವಸೆಯು ಮಾಯ ಆಗಿರುತ್ತದೆ ಎಂದರು …..

ಏಕೆಂದರೆ ಕಳಸೂರು ಮುಖ್ಯ ಜಾಕ್ ವೆಲ್ ನಲ್ಲಿ 2500. ಎಚ್ ಪಿ ನೀರೆತ್ತುವ ಬೃಹತ್ ಮಶೀನ ಇದ್ದು ಇಲ್ಲಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳು ಉದ್ದೇಶಪೂರ್ವಕವಾಗಿ ನೀರೆತ್ತವ ಪ್ರಮಾಣವನ್ನು ಪ್ರತಿಶತ ಶೇಕಡ 100 ರಷ್ಟು ಜಾರಿ ಮಾಡದೆ ಕೇವಲ ಶೇಕಡ 30 ರಷ್ಟು ನೀರನ್ನು ಬೇಜವಾಬ್ದಾರಿತನದಿಂದ ಸರಬರಾಜ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೀಗೆ ಮಾಡುವುದರಿಂದ ಇಪ್ಪತ್ತು ದಿನಗಳಲ್ಲಿ ತುಂಬುವ ಕೆರೆಗಳು ಮೂರು ತಿಂಗಳಾದರೂ ಸದರಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ಯೋಜನೆಯ ಗುರಿಯನ್ನು ಮುಟ್ಟಲು ಸಾಧ್ಯವಾಗುವುದಿಲ್ಲ ಎಂದರು.

ಮತ್ತು ವಿಶೇಷೇನೆಂದರೆ ಸವಣೂರು ಮತ್ತು ಶಿಗ್ಗಾವ್ ಕ್ಷೇತ್ರಕ್ಕೆ ಉಪಚುನಾವಣೆ ಬಂದಿರುವುದರಿಂದ ಆಯಾ ಜಿಲ್ಲೆಗಳಿಂದ ಹೊಸ ಮುಖ ಬಂದು ನಾನು ಆಕಾಂಕ್ಷಿ ನೀನು ಆಕಾಂಕ್ಷಿ ಎಂದು ಈ ಕ್ಷೇತ್ರದಲ್ಲಿ ಸುಮಾರು 20 ಜನ ಆಕಾಂಕ್ಷಿ ಯಾಗಿ ತಮ್ಮ ತಮ್ಮ ಪ್ರಚಾರವನ್ನು ಮುಂದುವರಿಸಿದ್ದಾರೆ ಆದರೆ ಈ ಎಲ್ಲಾ ಆಕಾಂಕ್ಷಿಗಳಿಗೆ ಈ ಕ್ಷೇತ್ರದ ಜನರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಒಬ್ಬರು ಹೇಳುತ್ತಿದ್ದಾರೆ 78,000 ವೋಟು ಕೊಟ್ಟು ನನಗೆ ಆಶೀರ್ವಾದ ಮಾಡಿದ್ದಾರೆ ಮತ್ತೊಬ್ರು ಹೇಳ್ತಾ ಇದ್ದಾರೆ 64000 ಕ್ಕಿಂತ ಹೆಚ್ಚು ವೋಟು ಕೊಟ್ಟು ನನಗೂ ಆಶೀರ್ವಾದ ಮಾಡಿದ್ದಾರೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ ಈ ಕ್ಷೇತ್ರದ ಜನರಿಗೆ ನಿಮ್ಮದು ಕೊಡುಗೆ ಏನು ಸ್ವಾಮಿ ಈ ಕ್ಷೇತ್ರದ ಜನರಿಗೆ ನೀವು ಏನು ಮೂಲಭೂತ ಸೌಕರ್ಯಗಳನ್ನು ಕೊಡಿಸಿದ್ದಿರಿ ಈ ಕ್ಷೇತ್ರದ ಬಗ್ಗೆ ನಿಮ್ಮದು ಕೊಡುಗೆ ಏನು ನಾ ಮುಂದೆ ತಾ ಮುಂದೆ ಎಂದು ಎಲೆಕ್ಷನ್ ಸಲುವಾಗಿ ಪ್ರಚಾರ ಮಾಡುವದು ಅಷ್ಟೇನಾ?
ಎಲ್ಲಾ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸಾರ್ವಜನಿಕರ ಜೊತೆ ಸ್ಪಂದಿಸಿ ನೀರು ಕೊಡಿಸುವಲ್ಲಿ ಯಶಸ್ವಿಯಾಗುವುದು ಬಿಟ್ಟು ,ಬೆಂಗಳೂರಿನ ಅತ್ತ ಮುಖ ಮಾಡಿರುತ್ತಾರೆ, ಇನ್ನು ಗೆದ್ದ ಮೇಲೆ ಏನು ಕೆಲಸ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಎಂ ಎನ್ ನಾಯಕ್ ಅವರು ಈ ಕ್ಷೇತ್ರದ ಜನರಿಗೆ ನಾವು ಸಂಘಟನೆದವರು ನಿಮ್ಮ ತಾಲೂಕಿನ ಮೊತಿ ತಲಾಬ ಕೆರೆಗೆ ನೀರು ತುಂಬಿಸುವ ಸಲುವಾಗಿ ಆಯಾ ಸಂಘಟನೆಗಳಿಂದ ಹೋರಾಟವನ್ನು ಮಾಡುತ್ತಿದ್ದೇವೆ ಆದರೆ ಈ ತಾಲೂಕಿನ ಜನರು ನಮ್ಮ ಸಂಘಟನೆಗೆ ಯಾಕೆ ಕೈಜೋಡಿಸುತ್ತಿಲ್ಲ ಈ ಜನರಿಗೆ ನೀರಿನ ಅವಶ್ಯಕತೆ ಇರುವುದಿಲ್ಲ ಎಂದು ಮೇಲ್ನೋಟಕ್ಕೆ ಕಾಣಿಸ್ತಾ ಇದೆ ಆದ್ದರಿಂದ ಈ ತಾಲೂಕಿನಿಂದ ಹೆಚ್ಚಿನ ಜನರು ನಮ್ಮ ಹೋರಾಟಕ್ಕೆ ಬೆಂಬಲವನ್ನು ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಒಂದುವೇಳೆ 7 ದಿನದ ಒಳಗಾಗಿ ನೀರು ತುಂಬುವ ಕೆಲಸ ಆಗಲಿಲ್ಲ ಅಂದರೆ ಉಪ ವಿಭಾಗ ಅಧಿಕಾರಿಗಳ ಕಚೇರಿ ಮುಂದೆ ಉಗ್ರವಾಗಿ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾಧ್ಯಕ್ಷರಾದ ಎಂ ಎನ್ ನಾಯಕ್, ತಾಲೂಕ್ ಅಧ್ಯಕ್ಷರಾದ ಸಂಗಮೇಶ್ ಪಿತಾಂಬರಶೆಟ್ಟಿ, ಶಹರ ಘಟಕ ಅಧ್ಯಕ್ಷರಾದ ಬಾಬು ಪರಾಶ, ಪ್ರಧಾನ ಕಾರ್ಯದರ್ಶಿಯಾದ ನಾಗರಾಜ್ ಬಂಕಾಪುರ್, ಬಸವರಾಜ್ ಮೈಲಂನವರ್. ಪಿಎಸ್ಆರ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕೌನ್ಸಿಲ್ ಜಿಲ್ಲಾಧ್ಯಕ್ಷರಾದ ಸಂದೀಪ್ ಬಾಬನಿ, ಡಿಎಸ್ಎಸ್ ತಾಲೂಕ ಅಧ್ಯಕ್ಷರಾದ ಪ್ರಶಾಂತ್ ಮುಗಳಿ, ಇನ್ನು ಆಯಾ ಸಂಘಟನೆಗಳಿಂದ ನೂರಾರು ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು.

ವರದಿ:-ರಮೇಶ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!