Ad imageAd image

ಭೌದ್ದರ ಐತಿಹಾಸಿಕ ಸ್ಥಳ ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ 500ಕೋಟಿ ವಿಶೇಷ ಅನುಧಾನ ನೀಡುವಂತೆ ಮನವಿ ಪತ್ರ.

Bharath Vaibhav
ಭೌದ್ದರ ಐತಿಹಾಸಿಕ ಸ್ಥಳ ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ 500ಕೋಟಿ ವಿಶೇಷ ಅನುಧಾನ ನೀಡುವಂತೆ ಮನವಿ ಪತ್ರ.
WhatsApp Group Join Now
Telegram Group Join Now

ಸೇಡಂ:  ಕರ್ನಾಟಕದಲ್ಲಿ ಕಲೆ,ಸಾಂಸ್ಕೃತಿಕ, ಮತ್ತು ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ಮತ್ತು ನೇತೃತ್ವದ ಸರಕಾರವು ಅನೇಕ ಪ್ರಾಡಿಕಗಳಿಗೆ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ರಾಜ್ಯ,ರಾಷ್ಟ್ರ, ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳಾಗಿ ಪರಿವರ್ತನೆಗೆ ತಮ್ಮ ಪಣ ಸರಕಾರದ ಪ್ರಯತ್ನ ಬಹಳ ಶ್ಲಾಘನೀಯ.

ಕಲಬರುಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕನಗನಹಳ್ಳಿ, ಸನ್ನತಿ, ಯಾದಗಿರಿ ಜಿಲ್ಲೆಯ ಶಹಾಪೂರ ಹೀಗೆ ಅನೇಕ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹ ಭಾಗಿತ್ವದಲ್ಲಿ ನಡೆಸಿ ವಿಶ್ವವಿಖ್ಯಾತ ಬೌದ್ಧ ಧರ್ಮದ ಬಗ್ಗೆ ಅನೇಕ ಶೀಲಾ ಶಾಸನಗಳು ಮತ್ತು ಪ್ರಿಯಾದ ಸಾಮ್ರಾಜ್ಯ ಅಶೋಕ್ ರಾಜ ಮತ್ತು ಅವರ ಮಗ ಮಹೇಂದ್ರ ಕೂದ್ದ ಅನೇಕ ಶೀಲಾ ಲೇಖನಗಳು ಪಾಲಿ ಮತ್ತು ಭಾಷೆಗಳಲ್ಲಿ ದೊರೆತಿರುವುದು ರಾಜ್ಯ, ರಾಷ್ಟ್ರಕ್ಕೆ ವಿಶ್ವ ಮಟ್ಟದಲ್ಲಿ ಖ್ಯಾತಿಯಾಗಿದೆ ಹಾಗೆ ನಮಗೆ ತುಂಬಾ ಸಂತೋಷದ ಸಂಗತಿಯಾಗಿದೆ.

ರಾಜ್ಯ ಸರಕಾರವು ಭೌದ್ಧ ಪರಂಪರೆ ಕಲೆ, ಸಾಹಿತಿ, ರೂಪಿಸಿ ಅಭಿವೃದ್ಧಿ ಪಡಿಸಬೇಕು.

ಸನ್ನತಿ ಪ್ರಾಧಿಕಾರ ರಚಿಸಲಾಗಿ ಇದರ ಜೊತೆಗೆ ಕೂಡಲ ಸಂಗಮ ಮತ್ತು ಬಸವಕಲ್ಯಾಣ ಪ್ರಾಧಿಕಾರಗಳು ಅಸ್ತಿತ್ವಕ್ಕೆ ಬಂದಿರುವುದು ಗಮನಾರ್ಹವಾಗಿದೆ.

ಆದರೆ ಬಸವಕಲ್ಯಾಣ ಮತ್ತು ಕೂಡಲ ಸಂಗಮ ಪ್ರಾಡಿಕಾರಗಳಿಗೆ ನೀಡಿದ ಅಭಿವೃದ್ಧಿ ಸನ್ನತಿ ಪ್ರಾಧಿಕಾರಕ್ಕೆ ನೀಡಿರುವುದಿಲ್ಲ ಅದ ಕಾರಣ ರಾಜ್ಯದ ಬೌದ್ಧ ಉಪಸಕ/ಉಪಾಸಕಿಯರಿಗೆ ಬಹಳ ನೋವು ಉಂಟು ಮಾಡಿದೆ.

ಇತ್ತೀಚೆಗೆ ಕಲಬುರಗಿ ಬೇಟಿಯಾದ ಸಂದರ್ಭದಲ್ಲಿ ಸನ್ನತಿ ಪ್ರಾಧಿಕಾರಕ್ಕೆ ಅನುಧಾನ ನೀಡಲು ವಿವಿಧ ಸಂಘಗಳು ಬೇಡಿಕೆ ಇಟ್ಟರು.

ಮಾನ್ಯ ಸಚಿವರು ಹಾಗೂ ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಇವರ ಮುಖಾಂತರ ದಿನಾಂಕ 17/09/2024 ರಂದು ನಡೆದ ಸಚಿವ ಸಂಪುಟದಲ್ಲಿ ಸನ್ನತಿ ಪ್ರಾಧಿಕಾರ ಅಭಿವೃದ್ಧಿ ಅನುಧಾನ ಮಾಡಿರುವುದಿಲ್ಲ.

ಅದರಿಂದ ನಮ್ಮ ತಾಲೂಕಿನ ರಾಜ್ಯ ಬೌದ್ಧ ಉಪಸಕ/ಉಪಸಕೀಯರ ಪರವಾಗಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ವರದಿ ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!