Ad imageAd image

ಮುಧೋಳ್ ಗ್ರಾಮವನ್ನು ತಾಲೂಕ ಮಾಡುವಂತೆ ಸಚಿವ ಶರಣಪ್ರಕಾಶ ಪಾಟೀಲರಿಗೆ ಮನವಿ ಪತ್ರ.

Bharath Vaibhav
ಮುಧೋಳ್ ಗ್ರಾಮವನ್ನು ತಾಲೂಕ ಮಾಡುವಂತೆ ಸಚಿವ ಶರಣಪ್ರಕಾಶ ಪಾಟೀಲರಿಗೆ ಮನವಿ ಪತ್ರ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಮುಧೋಳ್ ಗ್ರಾಮ ಪಂಚಾಯಿತಿಯು ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಯತಿಯಾಗಿದ್ದು.ಈ ಗ್ರಾಮಕ್ಕೆ ಸುಮಾರು 56 ಹಳ್ಳಿಗಳು ಮತ್ತು 40 ತಾಂಡಗಳ ಜನರು ಈ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತವೆ.

ಈ ಗ್ರಾಮದಲ್ಲಿ ವಿಶೇಷ ತಹಶೀಲ್ದಾರರು ನೇಮಿಸಿದ್ದಾರೆ.ದೂರದ ಗ್ರಾಮಗಳಾದ, ಇಟ್ಕಲ್, ಬುರಗಪಲ್ಲಿ, ಯಾನಗುಂದಿ, ಕಾನಗಡ್ಡ, ಮೇದಕ್, ಶಕಲಾಸಪಲ್ಲಿ, ಮೋತಕಪಲ್ಲಿ, ಗಾಢದಾನ, ತೋಳಮಾಮಿಡಿ, ಕೊಲಕುಂದ, ರಿಬ್ಬನಪಲ್ಲಿ, ಲಿಂಗಂಪಲ್ಲಿ, ಜಾಕನಪಲ್ಲಿ, ಮತ್ತು ಇನ್ನಿತರ ತಾಂಡ ಕಂದಾಯ ಗ್ರಾಮಗಳು ಮತ್ತು ಗ್ರಾಮಗಳ ಜನರಿಗೆ ಸೇಡಂ ಹೋಗಿ ಬರಲು 120ಕಿಮೀ ಆಗುವುದರಿಂದ ಅನಾನುಕೂಲವಾಗಿದೆ.
ಸರಿಯಾದ ಸಮಯಕ್ಕೆ ವಾಹನಗಳ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಮುಧೋಳ್, ಆಡಕಿ, ಕೋಲಾಕುಂದ, ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಒಳಗೊಂಡ ನಮ್ಮ ಮುಧೋಳ್ ಗ್ರಾಮಕ್ಕೆ ವಿಶೇಷ ತಹಶೀಲ್ದಾರರ ನೇಮಕಾತಿಯನ್ನು ಮಾಡಿ ನಮ್ಮ ಹಿಂದುಳಿದ ಗಡಿಭಾಗದ ಜನರಿಗೆ ಅನುಕೂಲ ಮಾಡಬೇಕು ಮತ್ತು ಮುಧೋಳ್ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 24 ಗ್ರಾಮ ಪಂಚಾಯಿತಿ ಸದಸ್ಯರಿದ್ದು ಇದನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ಅಶೋಕ್ ಪಿರಂಗಿ ಅವರ ನೇತೃತ್ವದಲ್ಲಿ ಮುಧೋಳ್ ನಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಆಗುವ ಅನೇಕ ಹಕ್ಕೊತ್ತಾಯಗಳನ್ನು ಈ ಪಾತ್ರದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕ ಹೋರಾಟ ಸಮಿತಿ ಗೌರವ ಅಧ್ಯಕ್ಷರಾದ ಮಧುಸೂಧನ್ ರೆಡ್ಡಿ ಪಾಟೀಲ್, ಅಧ್ಯಕ್ಷರಾದ ಅಶೋಕ್ ಪಿರಂಗಿ, ಲಕ್ಷ್ಮೀಕಾಂತ್ ರಾವ್ ಕುಲ್ಕರ್ಣಿ, ಇಬ್ರಾಹಿಂ ಖಲೀಲ್, ರಾಘವೇಂದ್ರ ಕುಸುಮ, ಶ್ರೀನಿವಾಸ್ ರೆಡ್ಡಿ ಚಂದಾಪುರ, ವಿಠ್ಠಲ್ ಕುಂಬಾರ, ರಮೇಶ್ ದಾಮರಗಿದ್ದ, ಅಶೋಕ್ ಕೂನಿ, ದಲಿತ ಮಾದಿಗ ಸಮನ್ವಯ ಸಮಿತಿ ವಲಯ ಅಧ್ಯಕ್ಷರಾದ ಭೀಮು ಮುಧೋಳ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!