Ad imageAd image

ಅಗ್ಗಿ ಬಸವೇಶ್ವರ ಕಾಲನಿಗೆ ಹೋಗುವ ರಸ್ತೆಯ ಮಧ್ಯದಲ್ಲಿನ ಮುಳ್ಳುಕಂಟೆಗಳು ಸ್ವಚ್ಚತೆ ಮಾಡುವಂತೆ ಕರವೇ ಮನವಿ

Bharath Vaibhav
ಅಗ್ಗಿ ಬಸವೇಶ್ವರ ಕಾಲನಿಗೆ ಹೋಗುವ ರಸ್ತೆಯ ಮಧ್ಯದಲ್ಲಿನ ಮುಳ್ಳುಕಂಟೆಗಳು ಸ್ವಚ್ಚತೆ ಮಾಡುವಂತೆ ಕರವೇ ಮನವಿ
WhatsApp Group Join Now
Telegram Group Join Now

ಸೇಡಂ:- ಪಟ್ಟಣ ಚಿಂಚೋಳಿ ಕ್ರಾಸ್ ದಿಂದ ಆಗ್ಗಿ ಬಸವೇಶ್ವರ ಕಾಲೋನಿಗೆ ಹೋಗುವ ರಸ್ತೆ ಮಧ್ಯದಲ್ಲಿ ಡಿವೈಡರ್ ಇದ್ದುದ್ದರಿಂದ.ಡಿವೈಡರ್ ಮದ್ಯದಲ್ಲಿ ಮುಳ್ಳುಕಂಟೆಗಳು ಬೆಳೆದು ಸಾರ್ವಜನಿಕ ವಾಹನ ಸವಾರರಿಗೆ ತಿರುಗಾಡಲು ತುಂಬಾ ತೊಂದರೆ ಉಂಟಾಗಿದೆ.

ಇದರಿಂದ ಅಪಘಾತಗಳು ಆಗುವ ಸಂಭವವಿದ್ದು ದಯಮಾಡಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಮುಳ್ಳು ಕಂಟೆಗಳನ್ನು ತೆರವುಗೊಳಿಸಿ ಮುಂದೆ ಆಗುವಂತ ಅನಾಹುತಗಳು ತಪ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೆ ಚಿಂಚೋಳಿ ಕ್ರಾಸ್ ಹತ್ತಿರ ನಾಲ್ಕು ಚಕ್ರದ ಬೀದಿ ದೀಪದ ಲೈಟ್ ಹಾಕಲಾಗಿದ್ದು ಒಂದೆರಡು ಬಾರಿ ಮಾತ್ರ ಹಾಕಿರುತ್ತಾರೆ ಇಲ್ಲಿಯವರೆಗೆ ಲೈಟ್ ಬೀಳ್ತಾ ಇಲ್ಲ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ ಲೈಟ್ ಹಾಕಬೇಕಾಗಿ ಸಮಸ್ತ ಸೇಡಂ ತಾಲೂಕಿನ ಜನತೆ ಪರವಾಗಿ ಮನವಿಮಾಡಿಕೊಳ್ಳುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷರಾದ ದೇವು ಕುಮಾರ್ ನಾಟಿಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!