ಐಗಳಿ : ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕರಿಗೆ ಗ್ರಾಮದಲ್ಲಿ ಜಾಗೆ ಮತ್ತು ಸಮುದಾಯ ಭವನ ಮಂಜೂರು ಮಾಡಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರ ರಾಜೇಂದ್ರ ಪಾಟಕ ಅವರಿಗೆ ಮಾಜಿ ಸೈನಿಕ ಸಂಘದ ವತಿಯಿಂದ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷರಾದ ಕಲ್ಮೇಶ ಆಸಂಗಿ ಅವರು ಮಾತನಾಡಿ ಅಥಣಿ ತಾಲೂಕಿನ ಐಗಳಿ ಗ್ರಾಮವು ಭಾರತೀಯ ಸೇನೆ,ನೌಕಾಪಡೆ ಹಾಗೂ ವಾಯುಪಡೆಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅನೇಕ ಧೈರ್ಯಶಾಲಿ ಸೈನಿಕರನ್ನು ನೀಡಿದ ಹೆಮ್ಮೆಯ ನಮ್ಮ ಐಗಳಿ ಗ್ರಾಮಕ್ಕೆ ಇದೆ. ಅವರು ಸೇವೆ ಸಲ್ಲಿಸಿ ನಮ್ಮ ಗ್ರಾಮಕ್ಕೆ ಮರಳಿ ಆಗಮಿಸಿದಾಗ ಅವರಿಗೆ ಗೌರವ ನೀಡುವುದು ನಮ್ಮ ಕರ್ತವ್ಯವಾಗಿದೆ. ಗ್ರಾಮಕ್ಕೆ ಬಂದ ಮೇಲೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೇನಾ ನೇಮಕಾತಿ ಕುರಿತು ಯುವಕರಿಗೆ ಮಾರ್ಗದರ್ಶ ಹಾಗೂ ಪ್ರೇಯಣಾ ಕಾರ್ಯಕ್ರಮ ಮಾಡಲು ಮತ್ತು ಮಾಜಿ ಸೈನಿಕರ ಕಲ್ಯಾಣ ಕಾರ್ಯ ಚಟುವಟಿಕೆಗಳನ್ನು ನಡೆಸಲು ಹಾಗೂ ರಾಷ್ಟ್ರ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ದಿನಾಚರಣೆ ಆಚಾರಣೆ.
ಸಮಾಜ ಸೇವೆ ಮಾಡಲು ಗ್ರಾಮದಲ್ಲಿ ಒಂದು ಸೂಕ್ತವಾದ ಸ್ಥಳ ಇಲ್ಲದಂತಾಗಿದೆ ಆದಕಾರಣ ಮಾಜಿ ಸೈನಿಕರಿಗೆ ಗ್ರಾಮದಲ್ಲಿ ಸೈನಿಕ ಭವನ ಮತ್ತು ಅದಕ್ಕೆ ಸೂಕ್ತ ವಾದ ಜಾಗವನ್ನು ಮಂಜೂರು ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ರಾಮಗೊಂಡ ಬಿರಾದ ಉಪಾಧ್ಯಕ್ಷ ರಮೇಶ ಕಾಯಿಪುರಿ ಕಾರ್ಯದರ್ಶಿ ಪ್ರವೀಣ್ ನಾಗಮೋತಿ ರಾಮಚಂದ್ರ ಪೂಪಲೆ ಗುರಪ್ಪ ಬಾಗಲಕೋಟ ಅರ್ಜುನ ಭಜಂತ್ರಿ ರಾಮಗೊಂಡ ಪಾಟೀಲ ಬಸವರಾಜ ನೇಮಗೌಡ ಸೇರಿದಂತೆ ಅನೇಕ ಮಾಜಿ ಸೈನಿಕರು ಉಪಸ್ಥಿತಿ ಇದ್ದರು.
ವರದಿ : ಆಕಾಶ ಮಾದರ




