Ad imageAd image

ನವೆಂಬರ್ 4 ರಂದು ಹುಕ್ಕೇರಿ ಬಂದ್ ಗೆ ಸಹಕರಿಸಲು ವಿನಂತಿ

Bharath Vaibhav
ನವೆಂಬರ್ 4 ರಂದು ಹುಕ್ಕೇರಿ ಬಂದ್ ಗೆ ಸಹಕರಿಸಲು ವಿನಂತಿ
WhatsApp Group Join Now
Telegram Group Join Now

ಹುಕ್ಕೇರಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಇದರ ಜೊತೆಗೂಡಿ ರಕ್ಷಣಾ ವೇದಿಕೆ ಒಕ್ಕೂಟಿನಿಂದ ಹುಕ್ಕೇರಿ ಪಟ್ಟಣದಲ್ಲಿ ಮಂಗಳವಾರ 4/11/ 2025ರಂದು ಸಂಪೂರ್ಣ ಬಂದ

ಹುಕ್ಕೇರಿ ಸಮಸ್ತ ರೈತರು ಹಲವು ಸಂಘಟನೆ ವ್ಯಾಪಾರಸ್ಥರು ಕಾರ್ಮಿಕರು ವಕೀಲರು ಸಹಕರಿಸಿದ್ದು ರೈತರ ಬಂದ ಕರೆಯಲ್ಲಿ ಸಹಕರಿಸಬೇಕೆಂದು ವಿನಂತಿ.

ರೈತ ಹೋರಾಟ ಬಿಡದೆ ಹೋರಾಟವನ್ನು ಮಾಡುತ್ತಿದ್ದೇವೆ ಆದರೆ ರೈತರ ಹತ್ತಿರ ಗಮನವನ್ನು ಹರಿಸುತ್ತಿಲ್ಲಾ ನಿನ್ನೆ ರಾತ್ರಿ ಬಸವೇಶ್ವರ ಸರ್ಕಲ್ ನಲ್ಲಿ ಧರಣಿ ನಡೆಸಿದ್ದು ಮಳೆ ಬಂದರೂ ಲೆಕ್ಕಿಸದೆ ಧರಣಿಯನ್ನು ನಡೆಸಿದ್ದು ಸಕ್ಕರೆ ಕಾರ್ಖಾನೆಯ ಮಾಲೀಕರು ಬೇಜವಾಬ್ದಾರಿ ತೋರಿಸಿದ್ದಾರೆ.

ರೈತರ ಬೇಡಿಕೆ ಪ್ರತಿ ಟನ್ ಕಬ್ಬಿಗೆ 3500 ಘೋಷಣೆ ಮಾಡುವಂತೆ ರೈತರ ಬೇಡಿಕೆ ಇರುತ್ತದೆ ರೈತರ ಹಿತಗೋಸ್ಕರ ಬಂದ್ ಕರೆಯನ್ನು ನೀಡಲಾಗಿದ್ದು.

ಮಂಗಳವಾರ 4/11/2025 ರಂದು ಮುಂಜಾನೆ ಅಡವಿ ಸಿದ್ದೇಶ್ವರ ಮಠದಿಂದ ಬಸವೇಶ್ವರ ಸರ್ಕಲ್ ಅವರಿಗೆ ಪಾದಯಾತ್ರೆ ಮುಖಾಂತರ ಮೆರವಣಿಗೆ ಹಮ್ಮಿಕೊಂಡಿದ್ದು ಹುಕ್ಕೇರಿ ತಾಲೂಕಿನ ಎಲ್ಲ ರೈತರು ಬಂದ ಕರೆಯಲ್ಲಿ ಭಾಗವಹಿಸಿ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ ಮರಬಸಣ್ಣವರ, ರಾಮಚಂದ್ರ ಜೋಶಿ (ವಕೀಲರು) ಮಾಧ್ಯಮದೊಂದಿಗೆ ಹೇಳಿದರು.

ಈ ಸಂದರ್ಭದಲ್ಲಿ ಜಿಯಾವುಲ್ಲ ಒಂಟಮೂರಿ,(ರಾಜ್ಯ ಉಪಾಧ್ಯಕ್ಷರು) ಬಸವ ಪ್ರಭು ವಂಟಮುರಿ,( ಜಿಲ್ಲಾ ಅಧ್ಯಕ್ಷರು) ಶಾಂತಿನಾಥ ಮಗದುಮ್ಮ,(ತಾಲೂಕ ಅಧ್ಯಕ್ಷರು) ವಿಶ್ವನಾಥ್ ನಾಯಿಕ,(ಹುಕ್ಕೇರಿ ಬ್ಲಾಕ್ ಅಧ್ಯಕ್ಷರು) ಸುಭಾಷ್ ನಾಯಿಕ, (ರೈತ ಮುಖಂಡರ) ತಮ್ಮನ ಗೌಡ ಪಾಟೀಲ, ಸುನಿಲ ಮ ಬೈರಣ್ಣವರ,(ದಲಿತ ಮುಖಂಡರು) ಅಲಗೌಡ ಪಾಟೀಲ, ಮಹಾರುದ್ರ ಮರಬನ್ನವರ,ಕೆಂಪಣ್ಣ, ಹಾಗೂ ಹುಕ್ಕೇರಿ ತಾಲೂಕಿನ ರೈತರು ಮತ್ತು ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!