ಕಾಗವಾಡ:ಕಳೆದ 3- 4 ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದ್ದರು ಕೂಡಾ ಸರಕಾರದ ಕಣ್ಣು ಕಾಣತಾಯಿಲ್ಲ ಕಿವಿ ಕೇಳ್ತಾಯಿಲ್ಲ ಹಿಂತಾ ಜನ ವಿರೋಧಿ ಸರಕಾರ ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಯುವ ಒಳಗಾಗಿ ಬೇಗನೆ ಎಚ್ಚತುಕೊಂಡು ಸುಗ್ರೀವಾಜ್ಞೆಯೊಂದಿಗೆ ಪಥಮ ಆದ್ಯತೆಯೊಂದಿಗೆ ನಮ್ಮ ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಿಸಬೇಕು.ಎಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಮಾನ್ಯ ಕಾಗವಾಡ ತಹಸೀಲ್ದಾರ ಕಾರ್ಯಾಲಯದ ವರೆಗೆ ದಂಡನಮಸ್ಕಾರ (ದಂಡವತ) ಹಾಕುತ್ತಾ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕತರು ಕಾಗವಾಡ ತಹಶಿಲ್ದಾರ ರವಿಂದ್ರ ಹಾದಿಮನಿಯವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಅವರು ದಿ 18ರಂದು ಕಾಗವಾಡ ತಹಶಿಲ್ದಾರರಿ ಕಾರ್ಯಲಕ್ಕೆ ಭೇಟಿ ನೀಡಿ ಮನವಿ ಸಲಿಸಿದ ಅವರು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 01-01-2026 ರಿಂದ ಚಿಕ್ಕೋಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸರಕಾರ ಯಾವುದೇ ಕಾರ್ಯಕ್ರಮ ನಡೆದರು ಅಲ್ಲಿ ಕಪ್ಪು ಭಾವುಟ ಪ್ರದರ್ಶಿಷಿಸಲಾಗುವುದು ಎಚ್ಚರಿಸಿದರು.
ನಮ್ಮ ಕರ್ನಾಟಕದ ಹೆಬ್ಬಾಗಿಲು ಕಾಗವಾಡ ತಾಲೂಕು ಘೋಷಣೆಯಾಗಿ 7-8 ವರ್ಷಗಳು ಕಳೆದರು ಕೂಡಾ ಇಲ್ಲಿಯವರೆಗೆ ಪ್ರಜಾ ಸೌಧ ನಿರ್ಮಾಣ ಮಾಡದೆ ಕುಂಟು ನೇಪ ಹೇಳಿಕೊಂಡು ನಮ್ಮ ಕಾಗವಾಡ ತಾಲೂಕ್ಕಿಗೆ ಅನ್ಯಾಯ ವ್ಯಸಗುತ್ತಿರುವುದು ಎಷ್ಟು ಸರಿಹೇಳಿ ಸ್ವಾಮಿ?.
ನಮ್ಮ ಪಕ್ಕದ ಬಾಬಲೇಶ್ವರ ಹಾಗೂ ತಿಕೋಟಾ ಕೂಡಾ ಕಾಗವಾಡದ ಜೊತೆಯಲ್ಲಿಯ ತಾಲೂಕು ಘೋಷಣೆಯಾಗಿ ಅಲ್ಲಿ ರೂ 15 ಕೋಟಿಗೂ ಅಧಿಕ ಮೊತ್ತದಲ್ಲಿ ಪ್ರಜಾ ಸೌಧ ಸರಕಾರ ನಿರ್ಮಾಣಮಾಡಿ ಕೊಟ್ಟಿದು ಇರುತ್ತದೆ ಆದರೆ ಕಾಗವಾಡ ಮಾತ್ರ ಕೇವಲ ರೂ-8 ಕೋಟಿ ಮಾತ್ರ ಪ್ರಸ್ತಾವನೆಯನ್ನು ಮಾಡಿ ಕೊಡುತ್ತಿದ್ದು ಇದು ಈ ಸರಕಾರದ ಮಂಡುತನವನ್ನು ಎತ್ತಿ ತೋರುತ್ತಿದೆ.
ಮುಖ್ಯಮಂತ್ರಿಗಳಿಗೆ ಕಿತ್ತೂರು ಕರ್ನಾಟಕ ಸೇನೆವತಿಯಿಂದ ನಾವು ಅಗ್ರಹವನ್ನು ಮಾಡುತ್ತೇವೆ .
ಬಬಲೇಶ್ವರ ಹಾಗೂ ತಿಕೋಟಾಕ್ಕೆ ₹15 ಕೋಟಿಗೂ ಅಧಿಕ ಮೊತ್ತದ ಪ್ರಜಾ ಸೌಧ ನಿರ್ಮಾಣ ಮಾಡಿ ಕೊಟ್ಟಿದಿರೋ ಅದೆ ರೀತಿಯ ಮಾದರಿಯಲ್ಲಿ ನಮ್ಮ ಕಾಗವಾಡಕ್ಕೂ ಕೂಡಾ ಯಾವುದೇ ಮಲತಾಯಿ ಧೋರಣೆ ಮಾಡದೆ 31-12-2025 ರ ಒಳಗಾಗಿ ₹15 ಕೋಟಿಗೂ ಅದಿಕ ಮೊತ್ತದ ಪ್ರಜಾ ಸೌಧದ ಮಂಜೂರಾತಿಯನ್ನು ನೀಡಿ ಅಡಿಗಲ್ಲು ಪೂಜೆಮಾಡಿ ಕೆಲಸ ಪ್ರಾರಂಭಿಸಬೇಕು.
ಸಂದರ್ಭದಲ್ಲಿ ಶಿವಾನಂದ ನವಿನಾಳೆ, ರವಿ ಪಾಟೀಲ, ಅಶೋಕ ಕಾಂಬಳೆ,ಅನಿಲ ಭಜಂತ್ರಿ ಉಪಸ್ಥಿತರಿದ್ದರು.
ವರದಿ :ಚಂದ್ರಕಾಂತ್ ಕಾಂಬಳೆ




