ಬೆಳಗಾವಿ: ರಾಜ್ಯದ ದ್ರಾಕ್ಷಿ ಬೆಳಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಸಿಸಲು ಲೋಕಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮತ್ತು ಚಿಕ್ಕೋಡಿ ಲೋಕಸಭಾ ಸಂಸದರು ಪ್ರಿಯಾಂಕ ಜಾರಕಿಹೊಳಿ ಅವರಿಗೆ ದ್ರಾಕ್ಷಿ ಬೆಳಗಾರುರು ಮನವಿ ಸಲ್ಲಿಸಿದರು. ರಾಜ್ಯ ಮತ್ತು ಕೇಂದ್ರದಲ್ಲಿ ನಡೆಯುತ್ತಿರುವ ಅಧೀವೇಶದಲ್ಲಿ ದ್ರಾಕ್ಷಿ ಬೆಳೆಗಾರರ ಕಷ್ಟದ ಕುರಿತು ಚರ್ಚೆಸಿ ರೈತರಿಗೆ ಅನೂಕೂಲ ಮಾಡಿಕೊಂಡಬೇಕು ಎಂದು ಒತ್ತಾಯಿಸಿದರು. ಅಥಣಿ ತಾಲೂಕಿನಲ್ಲಿ ಸುಮಾರ 15000 ಸಾವಿರ ಎಕರೆ ದ್ರಾಕ್ಷಿ ಬೆಳೆಯುತ್ತಿದ್ದು ಈ ಭಾಗದಲ್ಲಿ ದ್ರಾಕ್ಷಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ ವಾತಾವರಣ ವೈಪರೀತದಿಂದ ಉತ್ಪಾದನಾ ಕರ್ಚ ವೆಚ್ಚು ಹೆಚ್ಚಳವಾಗಿದೆ ದರ ಕುಸಿತ ದಿಂದಾಗಿ ರೈತರು ಪ್ರತಿಭಾರಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಇದರಿಂದಾಗಿ ರೈತರು ಸರ್ಕಾರದ ವಿರುದ್ದ ಹೋರಾಟ ಪ್ರಾರಂಭ ಮಾಡುವ ಅಗತ್ಯ ಇದೆ. ತಾವುಗಳ ದ್ರಾಕ್ಷಿ ಬೆಳಗಾರರ ಕಷ್ಟದ ಕುರಿತು ಚಳಿಗಾಲದ ಸಂಸತ ಅಧಿವೇಶನದಲ್ಲಿ ಚರ್ಚೆ ಮಾಡಿ ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರಸ್ ಮುಖಂಡರಾದ ಬಾಳಸಾಬ ಮುಜಾವರ ಐಗಳಿ ಗ್ರಾಮದ ಹಿರಿಯರಾದ ಸಿದ್ದಪ್ಪ ಬಳ್ಳೂಳ್ಳಿ ಬಂದೇನಮಾಜ ಮುಜಾವರ ಪರಗೊಂಡ ಬಿರಾದರ ಆಕಾಶ ಮಾದರ ಯಮನೂರ ಪಾತ್ರೂಟ್ ಮುಂತಾದವರು ಉಪಸ್ಥಿತಿ ಇದ್ದರು.
ವರದಿ : ಆಕಾಶ ಎಮ್ ಐಗಳಿ