ಸೇಡಂ: ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ.ನಾಗರಾಜ ಮನ್ನೆಯವರ ದುರ್ವರ್ತನೆ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಚಿವರಾದ ಡಾಕ್ಟರ್ ಶರಣಪ್ರಕಾಶ ಪಾಟೀಲ್ ರವರಿಗೆ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ವತಿಯಿಂದ ಮನವಿ ಪತ್ರ ನೀಡಲಾಯಿತು.
ಡಾ. ಮನ್ನೆಯವರು ಆಡಿರುವ ಮಾತುಗಳು, ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಿದ್ದು ಅದನ್ನು ಪ್ರಶ್ನಿಸಿದಾಗ ಹೀಗೆ ದೈರ್ಯ ಗ…… ಇದ್ದವರು ಕೇಳಬೇಕಂತೆ.
ಇತರ ಅವಾಚ್ಯ ಶಬ್ದಗಳಾಡಿದ ಡಾಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರಾದ ಸಿದ್ಧಾರ್ಥ್ ಎಂ,ಪಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರಾದ ಸಿದ್ಧಾರ್ಥ್ ಎಂ ಪಿ, ಉಪಾಧ್ಯಕ್ಷರಾದ ಮಹೇಶ್ ದೊಡ್ಡಮನಿ, ಕಾರ್ತಿಕ್ ಶೆಟ್ಟಿ, ರೋಹಿತ್, ಆಕಾಶ, ಸಾಬ್ ಎನ್ ಜಿ, ದರ್ಶನ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




