ಆಲಮಟ್ಟಿ:ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ (ರಿ). ಬಸವನಬಾಗೇವಾಡಿ ತಾಲೂಕ ವತಿಯಿಂದ ಒಳ ಮೀಸಲಾತಿ ಹಂಚಿಕೆ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು ದಿನಾಂಕ 3 ಸೆಪ್ಟೆಂಬರ್ 2025 ರಂದು ಇಂದು ಬಸವನ ಬಾಗೇವಾಡಿಯಲ್ಲಿ ನಡೆಯಿತು.
ಜಿಲ್ಲಾಧ್ಯಕ್ಷಕರು ಡಾಕ್ಟರ್ ಬಸವರಾಜ ಚವ್ಹಾನ್ ಹಾಗೂ ತಾಲೂಕ ಅಧ್ಯಕ್ಷರು ಬಾಳು ರಾಥೋಡ್ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ಮೂಲಕ ತಹಶೀಲ್ದಾರ್ ಅವರಿಗೆ ಮನವಿಯನ್ನು ಕೊಟ್ಟರು.

ಈ ಸಮಯದಲ್ಲಿ ಮಾಧ್ಯಮದವರ ಮುಂದೆ ತಮ್ಮ ಅಭಿಪ್ರಾಯಗಳನ್ನು ಕೆಸರಟ್ಟಿ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡಿ ಆಯೋಗ ಮಾಡಿದ ಶಿಫಾರಸು, ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರ ಮತ್ತು ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ 2022ರ ಸೆಕ್ಷನ್ (6)1 ರ ಅಡಿಯಲ್ಲಿ ರಚಿಸಲಾದ 2 ನಿಯಮಗಳಿಗೆ ಅಕ್ಷೇಪನೆ ಇದೆ ಮತ್ತು ಈ ಪ್ರತಿಭಟನೆಯ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸುವದೇನೆಂದರೆ ಬೋವಿ, ವಡ್ಡರ್, ಕೊರವ, ಕೊಂಚ ಹಾಗೂ ಬಂಜಾರ ಸಮುದಾಯಗಳಿಗೆ ಈ ಕಾಯ್ದೆಯಿಂದ ನಮ್ಮೆಲ್ಲರಿಗೆ ಅನ್ಯಾಯವಾಗಿರುತ್ತದೆ. ಈ ಕಾಯ್ದೆಯು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶೇಗೆ ತಣ್ಣೀರು ಎರಚಿದಂತಾಗುತ್ತದೆ. ಈ ಕಾಯ್ದೆಯನ್ನು ಹಿಂಪಡೆಯದಿದ್ದರೆ ಇನ್ನು ದೊಡ್ಡ ಹೋರಾಟ ನಡೆಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ಸಂದೇಶ ನೀಡಿದರು. ಹಾಗೂ ದಿನಾಂಕ 10/09/2025 ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಂದು ಈ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಡಾ. ಬಸವರಾಜ್ ಚೌಹಾನ್ ಹಾಗೂ ತಾಲೂಕ ಅಧ್ಯಕ್ಷರು ಬಾಳು ಬಸು ರಾಥೋಡ್ ಕೆಸರಟ್ಟಿ ಸೋಮಲಿಂಗ ಮಹಾಸ್ವಾಮಿ, ರವಿ ರಾಠೋಡ್, ಬಾಳು ರಾಥೋಡ್, ಆನಂದ್ ಚವಾನ್, ವಿನೋದ್ ಪವಾರ್, ನೀಲು ನಾಯಕ ಹಾಗೂ ಪೂರ್ವಸಭೆ ಸದಸ್ಯರು, ಬಂಜಾರ ಸಮಾಜದ ಹಿರೇ ಮುಖಂಡರು ಸೇರಿದ್ದರು.
ವರದಿ :ಕೃಷ್ಣ ಎಚ್. ರಾಥೋಡ್




