Ad imageAd image

ಪರಭಾಷೆಯನ್ನು ಗೌರವಿಸಿ ನಮ್ಮ ಭಾಷೆಯನ್ನು ಪ್ರೀತಿಸಿ: ಸ್ವಾಮಿ ಬಿ ಹಿರೇಮಠ

Bharath Vaibhav
ಪರಭಾಷೆಯನ್ನು ಗೌರವಿಸಿ ನಮ್ಮ ಭಾಷೆಯನ್ನು ಪ್ರೀತಿಸಿ: ಸ್ವಾಮಿ ಬಿ ಹಿರೇಮಠ
WhatsApp Group Join Now
Telegram Group Join Now

ಸೇಡಂ: ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕ ಸೇಡಂ ವತಿಯಿಂದ ತಾಲೂಕಿನ ದುಗನೂರು ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಕನ್ನಡ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಧ್ಯಕ್ಷತೆ ಶಾಲೆಯ ಮುಖ್ಯ ಗುರುಗಳಾದ ಚಂದ್ರಶೇಖರ್ ಪಸಾರ್ ರವರು ವಹಿಸಿದರು.

ಕಾರ್ಯಕ್ರಮದ ಉದ್ಘಾಟನೆ ನಾಗಮ್ಮ ಜಗದೇವಪ್ಪ ಸೌಕಾರ್ ನಾಚ್ವರ್ ಗ್ರಾಮ ಪಂಚಾಯತ್ ಅಧ್ಯಕ್ಷರು ದುಗನೂರ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವರದಾ ಸ್ವಾಮಿ ಬಿ ಹಿರೇಮಠ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ಕಲ್ಬುರ್ಗಿ ಮತ್ತು ಶರಣಬಸಪ್ಪ ಸಿ,ಆರ್,ಪಿ ದುಗನೂರು ಕ್ಲಸ್ಟರ್, ಜಯ ಕರ್ನಾಟಕ ಜನಪರ ವೇದಿಕೆ ತಾಲೂಕ ಅಧ್ಯಕ್ಷರಾದ ಅಶೋಕ್ ಮಡಿವಾಳ, ವಿದ್ಯಾನಂದ ಸ್ವಾಮಿ, ನಾರಾಯಣ ಬೋವಿನ್, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವರದಾ ಸ್ವಾಮಿ ಬಿ ಹಿರೇಮಠ ಅವರು ಮುಧೋಳ ಮತ್ತು ಕೋಲ್ಕುಂದ ವಲಯದಲ್ಲಿ ಬರುವ ಕೆಲವು ಹಳ್ಳಿಗಳಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚಾಗಿ ಮನೆಗಳಲ್ಲಿ ಹಾಗೂ ಗ್ರಾಮದಲ್ಲಿ ಮಾತನಾಡುತ್ತಿರುವದರಿಂದ ಕನ್ನಡ ಭಾಷೆ ಮತ್ತು ಮಕ್ಕಳಿಗೆ ವಿದ್ಯಾಭಾಸ ಮಾಡಲು ತೊಂದರೆ ಆಗುತ್ತಿರುವುದು ಕಂಡು ಬರುತ್ತಿದೆ. ಮಕ್ಕಳನಿಂದಲೇ ಮನೆಯಲ್ಲಿ ಪೋಷಕರಿಗೆ ಕನ್ನಡ ಭಾಷೆ ಮಾತನಾಡುವಂತೆ ಶಾಲೆಯ ಆವರಣದಲ್ಲಿ ಸಸಿ ನೆಡುವುದರ ಮೂಲಕ ಕನ್ನಡ ಭಾಷೆ ಬಗ್ಗೆ ಜಾಗೃತರಾಗಲು ಇಂಥ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತದನಂತರ ಶಿಕ್ಷಣ ಪ್ರೇಮಿಗಳಾದ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ನವದ್ ರೆಡ್ಡಿ ಮಲ್ಕಪಲ್ಲಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನವೀನ್ ಸಹ ಶಿಕ್ಷಕರು, ಮಂಗಳ ಸಹ ಶಿಕ್ಷಕರು, ಶಾಮಪ್ಪ ತಳವಾರ್ , ಗುರುಪ್ರಸಾದ್, ಶಾಲೆಯ ಸಹ ಶಿಕ್ಷಕರುಗಳು ಮತ್ತು ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ಕಾರ್ಯಕರ್ತರು ಶಾಲೆ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!