ಗೋಕಾಕ: ದಿನದನಕ್ಕೆ ಕನ್ನಡಿಗರ ಮೇಲೆ ಕೆಲ ಮರಾಠಿ ಪುಂಡರು ಮಾಡುತ್ತಿರುವ ದಬ್ಬಾಳಿಕೆ ಖಂಡಿಸಿ ಅಂತವರ ಹೇಡೆ ಮುರಿ ಕಟ್ಟಲು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ
ಕರ್ನಾಟಕ ಬಂದ್ ಗೆ ಗೋಕಾಕ ನಗರದಲ್ಲಿ ಇವತ್ತು ನೀರಸ ಪ್ರತಿಕ್ರಿಯೆ
ವ್ಯಕ್ತವಾಗಿದೆ.
ಇಲ್ಲಿನ ಬಸ್ ನಿಲ್ದಾಣದಿಂದ ವಿವಿಧ ಮಾರ್ಗಗಳಿಗೆ ಬಸಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ.ನಗರದಲ್ಲಿ ಹೋಟೆಲ್, ಅಂಗಡಿಗಳು ಎಂದಿನಂತೆ ತೆರೆದಿದ್ದು,ಎಲ್ಲ ಮಾರ್ಗಗಳಲ್ಲಿ ಬಸ್, ವಾಹನಗಳ ಸಂಚಾರ ಸಹಜವಾಗಿದ್ದು ಪ್ರತಿಬಟನೆ ಬಗ್ಗೆ ಯಾವುದೆ ಪ್ರತಿಬಟನೆ ಕಂಡು ಬಂದಿಲ್ಲ.
ಆದರೆ ಇದೆ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಕರ್ನಾಟಕ ಬಂದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಘಟಪ್ರಭಾ ಮೃತ್ಯುಂಜಯ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಮಾಡಿದರು.
ಮೃತ್ಯುಂಜಯ ವೃತ್ತದಲ್ಲಿ ಸೇರಿದ ಕನ್ನಡ ಕಾರ್ಯಕರ್ತರು ಎಮ್ ಇ ಎಸ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಹಾಗೂ ಎಮ ಇ ಎಸ್ ನಿಷೇಧಿಸಲು ಆಗ್ರಹಿಸಿ ಕೆಲ ಕಾಲ ಹೆದ್ದಾರಿ ತಡೆದು ಘಟಪ್ರಭಾ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣಾ ಚೌಕಾಶಿ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಜಿಲ್ಲಾಧ್ಯಕ್ಷರು ಶ್ರೀ ರೆಹಮಾನ್ ಮೊಕಾಶಿ ಕನ್ನಡ ಸೇನೆ ತಾಲ್ಲೂಕು ಅದ್ಯಕ್ಷ ಅಪ್ಪಾಸಾಬ ಮುಲ್ಲಾ ಕರವೇ ಅರಳಿಕಟ್ಟಿ ಬಣದ ರಾಜ್ಯದ್ಯಕ್ಷ ಪ್ರಶಾಂತ ಅರಳಿಕಟ್ಟಿ ಕರವೇ ತಾಲ್ಲೂಕು ಅದ್ಯಕ್ಷ ರವಿ ನಾವಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಎನೆ ಆಗಲಿ ಕನ್ನಡಿಗರ ಮೇಲೆ ಕೆಲ ಮರಾಠಿ ಪುಂಡರಿಂದ ಆಗುತ್ತಿರುವ ಅನ್ಯಾಯ ತಡೆಯಲು ಕೆಲ ಸಂಘಟನೆಯವರು ಪ್ರತಿಭಟನೆ ಮಾಡಿದರೆ,ಇನ್ನೂ ಕೆಲ ಸಂಘಟನೆಯವರು ಪ್ರತಿಬಟನೆ ಮಾಡುತ್ತಿಲ್ಲ.ಘಟಪ್ರಬಾದಲ್ಲಿರುವ ಕನ್ನಡ ಕಿಚ್ಚು ಗೋಕಾಕದಲ್ಲಿ ಇಲ್ವಾ ಅನ್ನುವದು ಬುದ್ದಿ ಜೀವಿಗಳ ಪ್ರಶ್ನೆಯಾಗಿದೆ.
ವರದಿ : ಮನೋಹರ ಮೇಗೇರಿ