ಬೆಂಗಳೂರು : ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರನ್ನು ಅವರ ಪತ್ನಿ ಪಲ್ಲವಿಯೇ ಚಾಕುವಿನಿಂದ ಇರಿದು ಇಂದು ಬರ್ಬರವಾಗಿ ಕೊಲೆ ಮಾಡಿದ ಆರೋಪ ಪ್ರಕರಣ ಸಂಬಂಧ ಮಹತ್ವದ ಮಾಹಿತಿ ಹೊರಬಿದ್ದಿದೆ.
ಕೊಲೆ ಮಾಡಿದ ಬಳಿಕ ಐಪಿಎಸ್ ಅಧಿಕಾರಿ ರೂಪಕ್ ದತ್ತಾ ಎಂಬುವವರ ಪತ್ನಿಗೆ ಪಲ್ಲವಿ ವಿಡಿಯೋ ಕಾಲ್ ಮಾಡಿ ಮರ್ಡರ್ ಬಗ್ಗೆ ವಿವರಿಸಿದ್ದಾಳೆ.
‘I have finished the monster’ (ನಾನು ದೈತ್ಯನನ್ನು ಮುಗಿಸಿದ್ದೇನೆ) ಎಂದು ಗಂಡನ ಕೊಂದಿರುವ ಬಗ್ಗೆ ಡೆಡ್ಬಾಡಿಯನ್ನೂ ತೋರಿಸಿ ವಿಚಾರ ವಿವರವಾಗಿ ಹೇಳಿಕೊಂಡಿದ್ದಾಳೆಂದು ತಿಳಿದುಬಂದಿದೆ.
ಓಂ ಪ್ರಕಾಶ್ ಅವರ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಆಸ್ತಿ ವಿಚಾರಕ್ಕಾಗಿಯೇ ಹತ್ಯೆ ನಡೆಸಲಾಯಿತೇ? ಎಂಬ ಅನುಮಾನಗಳು ಉದ್ಭವಿಸಿವೆ.
ನಾನೇ ನನ್ನ ಗಂಡನನ್ನು ಹತ್ಯೆ ಮಾಡಿದ್ದೀನಿ ಅಂತಾ ಪೊಲೀಸರಿಗೆ ತಿಳಿಸಿ ಆಕೆಯ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಪಲ್ಲವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಓಂ ಪ್ರಕಾಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
1981 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಓಂಪ್ರಕಾಶ್ ಅವರನ್ನು ಹೆಂಡತಿ ಪಲ್ಲವಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯಲ್ಲೇ ಹತ್ಯೆಗೆ ಬಳಸಿದ್ದ ಚಾಕು ಖಾಕಿ ವಶಕ್ಕೆ ಪಡೆದಿದೆ. ಸದ್ಯ ಸೋಕೋ ಟೀಂ ಹಾಗೂ HSR ಲೇಔಟ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.