ಬೆಂಗಳೂರು: ನಿವೃತ್ತ ಡಿಜಿಪಿ ಓಂಪ್ರಕಾಶ್ ರಾಜ್ಯ ಪೊಲೀಸ್ ಇಲಾಖೆಯಲ್ಲೇ ಅತ್ಯುನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸಿ ನಿವೃತ್ತಿರಾದವರು. ಅದೆಷ್ಟೋ ಅಪರಾಧ ಕೃತ್ಯಗಳನ್ನು ಕಂಡ ಆತ ಕೊನೆಗೆ ತನ್ನ ಪತ್ನಿಯಿಂದಲೇ (wife) ಹತ್ಯೆಯಾಗಿದ್ದರು. ಆದ್ರೀಗ ಅವರ ಸಾವಿನ ಗುಟ್ಟು ಒಂದೊಂದಾಗೆ ತೆರೆದುಕೊಳ್ಳುತಿದ್ದು, ಕೊನೆಯುಸಿರೆಳೆಯುವ ಮುನ್ನ 25 ನಿಮಿಷಗಳ ಅವರ ನರಳಾಟ ಬಯಲಾಗಿದೆ.
ಆ ಸಾವು ಊಹೆಗೂ ಮೀರಿದ್ದು. ತನ್ನ ಪತ್ನಿಯಿಂದಲೇ ಕೊಲೆಯಾದ ಡಿಜಿಪಿ ಓಂಪ್ರಕಾಶ್ ಸಾವಿನ ಇನ್ಸೈಡ್ ಸಂಗತಿಗಳು ರೋಚಕ ತಿರುವು ನೀಡಿದೆ. ಪತಿಯ 20 ವರ್ಷಗಳ ಕಿರುಕುಳದಿಂದ ಬೇಸತ್ತು ಪ್ರತಿಕಾರ ತೀರಿಸಿಕೊಂಡಿದ್ದಾಗಿ ಹೇಳಿರುವ ಪಲ್ಲವಿ, ಹತ್ಯೆಯ ಒಂದೊಂದು ಸಂಗತಿಯನ್ನು ಸಿಸಿಬಿ ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ. ಆ ವಿಷಯಗಳು ನಿಜಕ್ಕೂ ಪೊಲೀಸರನ್ನು ಬೆಚ್ಚಿ ಬೀಳಿಸಿದೆ.
ಹೌದು, ಪತಿ ಓಂ ಪ್ರಕಾಶ್ ಕೊಲೆ ಮಾಡಿದ್ದ ಪಲ್ಲವಿ ಸಿಸಿಬಿ ಪೊಲೀಸರ ಮುಂದೆ ಹಲವು ಸಂಗತಿಗಳ ಹೇಳಿಕೆ ನೀಡಿದ್ದಾರೆ. ಇದರ ಜೊತೆಗೆ ಕೊಲೆ ಮಾಡಿದ ಆ ಕ್ಷಣದ ಇಂಚಿಂಚು ಮಾಹಿತಿ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ. ಊಟಕ್ಕೆ ಕುಳಿತಿದ್ದ ಓಂ ಪ್ರಕಾಶ್ 25 ನಿಮಿಷಗಳ ಕಾಲ ನರಳಾಡುವಂತೆ ಮಾಡಿದ್ದು, ಅದರ ಪ್ರತಿ ಹಂತವನ್ನು ಸಿಸಿಬಿ ಮುಂದೆ ಹೇಳಿಕೊಂಡಿದ್ದಾರೆ.
ಮೊದಲಿಗೆ ಬಾಟಲ್ ಗಾಜು ಹೊಡೆದು ಹಿಂಬದಿಯಿಂದ ಚುಚ್ಚಿದ್ದ ಪಲ್ಲವಿ, ನಂತರ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ. ಆ ಬಳಿಕ ತೀವ್ರ ರಕ್ತ ಸ್ರಾವವಾಗಿ ನರಳಾಡುರಿದ್ದ ಓಂ ಪ್ರಕಾಶ್ ಮೇಲೆ ಹಾರ್ಪಿಕ್ ತಂದು ಚೆಲ್ಲಿದ್ದಾರೆ. ರಕ್ತ ಗಾಯದ ಮೇಲೆ ಹಾರ್ಪಿಕ್ ಬಿದ್ದ ಉರಿಗೆ ಚೀರಿದಾಗ ಬೆಡ್ ಶೀಟ್ ತಂದು ಸುತಿದ್ದಾರೆ. ಮನೆಯಲ್ಲಾ ನೆತ್ತರು ಹರಿದರು ಪಲ್ಲವಿ ಪತಿಯ ಉಸಿರು ನಿಂತಿಲ್ಲ ಅನ್ನೊ ಯೋಚನೆಯಲ್ಲಿ ಹತ್ಯೆ ಮಾಡಲೆಂದು ಓಡಾಡಿದ್ದಾರೆ. ಅದರಂತೆ ನೆಲದಲ್ಲಿದ್ದ ರಕ್ತ ಕಾಲಿಗೆ ಅಂಟಿರುವುದು ಅರಿಯದೇ ಮೂರ್ನಾಲ್ಕು ರೂಂಗಳಲ್ಲಿ ಓಡಾಡಿದ್ದಾರೆ. ಜೊತೆಗೆ ಕಾರದ ಪುಡಿ ತಂದು ಓಂಪ್ರಕಾಶ್ ಮೇಲೆ ಚೆಲ್ಲಿದ್ದಾರೆ. ಒಟ್ಟಾರೆ ಪತ್ನಿಯ ಹಲವು ರೀತಿಯ ಹಲ್ಲೆಗಳಿಂದ ಸತತ 25 ನಿಮಿಷ ನರಳಾಟ ನಡೆಸಿದ ಓಂಪ್ರಕಾಶ್ ಆ ಬಳಿಕ ನೆಲದಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಇನ್ನು ಈ ಸಂಬಂಧ ಪಲ್ಲವಿ ವಿಚಾರಣೆ ನಡೆಸಿದ್ದ ಸಿಸಿಬಿ ಸ್ಥಳದಲ್ಲಿ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಿದ್ದಾರೆ. ಆದರೆ ಕೈಗಂಟಿದ ರಕ್ತದ ಕಲೆಯಲ್ಲೇ ಹಲವು ಬಾರಿ ವಸ್ತುಗಳ ಪದೆ ಪದೆ ಮುಟ್ಟಿದ್ದು, ಫಿಂಗರ್ ಪ್ರಿಂಟ್ಗಳು ಅಸ್ಪಷ್ಟವಾಗಿವೆ. ಸದ್ಯ ಇವುಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.